ನಿವಾಳಖೇಡ ಗ್ರಾಮದ ತಮ್ಮ ಜಮೀನಿನಲ್ಲಿ ತೊಗರಿ ಬೆಳೆಯಲ್ಲಿ ಕಾಯಿಯನ್ನು ವೀಕ್ಷಿಸುತಿರುವ ರೈತ ಚನ್ನಪ್ಪ ಕಾರಜೋಳ
ಸಿದ್ಧೇಶ್ವರಶ್ರೀ ಪ್ರೇರಣೆ
‘ನಮ್ಮ ಗ್ರಾಮದ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತಮಠಕ್ಕೆ 2018ರಲ್ಲಿ ಸಿದ್ಧೇಶ್ವರ ಸ್ವಾಮೀಜಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸ್ವಾಮೀಜಿಯವರು ಕೋಟಿ ವೃಕ್ಷ ಅಭಿಯಾನದ ಕುರಿತು ಪ್ರವಚನದಲ್ಲಿ ಮಾತನಾಡಿದ್ದರು. ಅದೇ ಸಂದರ್ಭದಲ್ಲಿ ನಾನು ನನ್ನ ಕಲ್ಲು ಮರಡಿ ಭೂಮಿಯಲ್ಲಿ 200 ನಿಂಬೆ ಗಿಡಗಳನ್ನು ನೆಟ್ಟಿದ್ದೆ. ಆದರೆ ಅವುಗಳಿಗೆ ನೀರು ಇರದ ಕಾರಣ ಮಹಾಂತರಮಠದಿಂದ ಕೊಡದಲ್ಲಿ ನೀರು ಹೊತ್ತು ತಂದು ಗಿಡಗಳಿಗೆ ಉಣಿಸುತ್ತಿದ್ದೆ. ಇದನ್ನು ಕೆಲವರು ವಿಡಿಯೊ ಮಾಡಿ ಸ್ವಾಮೀಜಿಗಳಿಗೆ ತೋರಿಸಿದ್ದಾರೆ. ವಿಡಿಯೊ ನೋಡಿದ ಸ್ವಾಮೀಜಿ ನನ್ನ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಕೃಷಿಯಲ್ಲಿ ಮುಂದುವರಿಯಲು ನನಗೆ ಪ್ರೇರಣೆಯಾಯಿತು ಎನ್ನುತ್ತಾರೆ ರೈತ ಚನ್ನಪ್ಪ ಕಾರಜೋಳ.