ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆಯಲ್ಲಿ ಸುರಿದ ಮಳೆ

Published 25 ಜೂನ್ 2023, 14:46 IST
Last Updated 25 ಜೂನ್ 2023, 14:46 IST
ಅಕ್ಷರ ಗಾತ್ರ

ತಾಳಿಕೋಟೆ: ಮಣ್ಣೆತ್ತಿನ ಪೂಜೆ, ಕುದುರೆ ಮೆರವಣಿಗೆ, ಮಂದಿರ ಮಸೀದೆಗಳ ಪ್ರಾರ್ಥನೆ, ಜೊತೆಗೆ ಖಾಸ್ಗತೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾದ ಸಪ್ತಭಜನೆ ಕಾರ್ಯಕ್ರಮ, ಗ್ರಾಮದೇವತೆ ಪೂಜೆ ಇವೆಲ್ಲವೂ ಮಳೆರಾಯ ಒಲಿಯಲೆಂದೇ ಮಾಡುವ ಭಕ್ತಿ ಸೇವೆಗಳೆಲ್ಲ ತನಗೆ ತಲುಪಿದವು ಎನ್ನುವಂತೆ ಮಳೆರಾಯ ಕೃಪೆತೋರಿದ.

ಭಾನುವಾರ ಬೆಳಗ್ಗೆಯಿಂದ ಮುಂದುವರೆದಿದ್ದ ಮೋಡ ಕವಿದ ವಾತಾವರಣ ಮಧ್ಯಾಹ್ನ ಮೂರು ಗಂಟೆಯ ಸಮಯಕ್ಕೆ ಮಳೆ ಅಬ್ಬರಿಸಿತು. ಕನ್ನಡ ಶಾಲಾ ಮೈದಾನದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಸಲಾಗುತ್ತಿದ್ದ ಟಗರಿನ ಸ್ಪರ್ಧೆಗೆ, ಅತ್ತ ಮಲ್ಲಕಂಭ ಪ್ರದರ್ಶನಕ್ಕೂ ಅಡ್ಡಿ ಮಾಡಿದರೂ ರೈತರು ಭಕ್ತರ ಸಂತಸದಲ್ಲಿದ್ದರು.

ಮಳೆಯಿಂದಾಗಿ ಜಾತ್ರಾಮಹೋತ್ಸವದಲ್ಲಿ ಬಂದಿರುವ ಅಂಗಡಿಗಳ ವ್ಯಾಪಾರಿಗಳು ಮಳೆಯಿಂದ ತೊಂದರೆ ಅನುಭವಿಸುವಂತಾಯಿತು. ಹದಗೆಟ್ಟ ರಸ್ತೆಗಳ ತೆಗ್ಗುಗಳಲ್ಲಿ ನೀರು ನಿಂತು ಪ್ರಯಾಣಿಕರಿಗೆ ವಾಹನ ಸವಾರರಿಗೆ ಅಡ್ಡಿ ಮಾಡಿತು.

ತಾಳಿಕೋಟೆ ಕನ್ನಡ ಶಾಲಾ ಮೈದಾನದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದಂಗವಾಗಿ ನಡೆಸಲಾಗುತ್ತಿದ್ದ ಟಗರಿನ ಸ್ಪರ್ಧೆಗೆ ಮಳೆರಾಯ ಅಡ್ಡಿ ಮಾಡಿದ್ದರಿಂದ ಜನರಿಂದ ತುಂಬಿದ್ದ ಅಂಗಳ ಭಾನುವಾರ ಖಾಲಿಯಾಗಿ ರಕ್ಷಣೆಗೆ ಓಡಿಹೋಗುವಂತಾಯಿತು.
ತಾಳಿಕೋಟೆ ಕನ್ನಡ ಶಾಲಾ ಮೈದಾನದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದಂಗವಾಗಿ ನಡೆಸಲಾಗುತ್ತಿದ್ದ ಟಗರಿನ ಸ್ಪರ್ಧೆಗೆ ಮಳೆರಾಯ ಅಡ್ಡಿ ಮಾಡಿದ್ದರಿಂದ ಜನರಿಂದ ತುಂಬಿದ್ದ ಅಂಗಳ ಭಾನುವಾರ ಖಾಲಿಯಾಗಿ ರಕ್ಷಣೆಗೆ ಓಡಿಹೋಗುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT