ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಿಗರು ಕೊಟ್ಟಿರುವ ಪ್ರೀತಿ ಸಾಕು: ಟೆನ್ನಿಸ್ ಕೃಷ್ಣ

Published 30 ಜೂನ್ 2024, 15:11 IST
Last Updated 30 ಜೂನ್ 2024, 15:11 IST
ಅಕ್ಷರ ಗಾತ್ರ

ವಿಜಯಪುರ: ‘ನಾನು ಜಾಸ್ತಿ ದುಡ್ಡು ಮಾಡಬೇಕಾಗಿದ್ದರೇ ತೆಲುಗು, ತಮಿಳು ಚಿತ್ರರಂಗಕ್ಕೆ ಹೋಗಬೇಕಾಗಿತ್ತು. ಆದರೆ, ಕನ್ನಡದ ಪ್ರೇಕ್ಷಕರು, ಅಭಿಮಾನಿಗಳು ಕೊಟ್ಟಿರೋ ಪ್ರೀತಿನೆ ಸಾಕು ಎಂದು ಹಾಸ್ಯ ಕಲಾವಿದನಾಗಿ ಪಾತ್ರ ಮಾಡುತ್ತಾ ಬಂದಿದ್ದೇನೆ, ಉತ್ತರ ಕರ್ನಾಟಕ ಭಾಗದ ಹಳ್ಳಿಗಳು ನನಗೆ ಚಿರಪರಿಚಿತ’ ಎಂದು ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು.

ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

‘ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ನಟರೊಂದಿಗೆ ನಾನು ನಟನೆ ಮಾಡಿರುವುದು ತೃಪ್ತಿ ತಂದಿದೆ’ ಎಂದರು.

‘ನಾನು ಹುಟ್ಟಿದ್ದು ಬೆಂಗಳೂರು ಈಗ ಸಿಂಗಾಪುರ ಆಗಿದೆ‌. ನಮ್ಮ ತಂದೆ ಟೆನ್ನಿಸ್ ಕೋಚ್ ಆಗಿದ್ದರು. ನಾನು ಟೆನ್ನಿಸ್ ಕೋಚ್ ಆಗಿದ್ದೆ, ಚಿತ್ರರಂಗಕ್ಕೆ ಬಂದ್ಮೇಲೆ ಟೆನ್ನಿಸ್ ಕೃಷ್ಣ ಅಂತ ಹೆಸರು ಇಟ್ಟುಕೊಂಡೆ, ಚಿತ್ರರಂಗದಲ್ಲಿ ಹೊನ್ನಾಳಿ ಕೃಷ್ಣ, ಬೆಕ್ಕಿನ ಕಣ್ಣು ಕೃಷ್ಣ ಇದ್ದಾರೆ. ಹೀಗಾಗಿ ಟೆನ್ನಿಸ್ ಕೃಷ್ಣ ಎಂದು ಹೆಸರು ಬದಲಾಯಿಸಿಕೊಂಡೆ, ನಾನು ಒಂದೇ ಒಂದು ಡ್ರಾಪ್ ಸಹಿತ ಮದ್ಯ ಸೇವನೆ ಮಾಡೋಲ್ಲ, ಆದ್ರು ಕುಡಕನ ಪಾತ್ರ ಅಭಿನಯಿಸಿದ್ದೇನೆ’ ಎಂದು ಹೇಳಿದರು.

ಯುವ ಮುಖಂಡ ರಾಮನಗೌಡ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಿಜಯಪುರ ನಗರ ಬೆಳೆಯುತ್ತಿದೆ, ಜೊತೆಗೆ ಹೊಟೇಲ್ ಉದ್ಯಮವೂ ಸಹ ಪೂರಕವಾಗಿ ಬೆಳೆಯುತ್ತಿದ್ದು, ಕೆಫೆ ಇನ್ ಸುತ್ತಲೂ ಕಾಲೇಜಿಗಳಿದ್ದು, ವ್ಯಾಪಾರಕ್ಕೆ ಪೂರಕವಾಗಿದೆ ಎಂದರು.

ಚಿತ್ರ ನಿರ್ಮಾಪಕ ಚಿದಂಬರಂ, ಟೌನ್ ಪ್ಯಾಲೇಸ್ ಮಾಲೀಕ ಹನುಮಂತರಾಯಗೌಡ ಬಿರಾದಾರ, ಕೆಫೆ ಇನ್ ಮಾಲೀಕ ಉಮೇಶ್ ತೊಂಡಿಕಟ್ಟಿ, ಸಂತೋಷ್ ಗಣಿ, ರಾಜು ಬಿಜ್ಜರಗಿ, ಯಶ್ವಂತ್ ಗುಗ್ಗರಿ, ಅಭಿಲಾಷ್ ಹಳಕಟ್ಟಿ, ಮುನಾಫ್ ಇನಾಂದಾರ್, ಶಿವಾನಂದ ತೊಂಡಿಕಟ್ಟಿ , ಈರಣ್ಣ ತೊಂಡಿಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT