ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಹಿರಿಯ ಕಲಾವಿದರಿಗೆ ಸನ್ಮಾನ

Published : 31 ಆಗಸ್ಟ್ 2024, 16:05 IST
Last Updated : 31 ಆಗಸ್ಟ್ 2024, 16:05 IST
ಫಾಲೋ ಮಾಡಿ
Comments

ವಿಜಯಪುರ: ನಗರದ ಪ್ರವಾಸೋದ್ಯಮ ಇಲಾಖೆಯ ಕಲಾ ಗ್ಯಾಲರಿಯಲ್ಲಿ ಯುವ ಲಲಿತ ಕಲಾ ಸಂಸ್ಥೆ ವತಿಯಿಂದ  ಶುಕ್ರವಾರ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ, ಎಂ.ಕೆ. ಪತ್ತಾರ, ಎಸ್.ಟಿ. ಕೆಂಭಾವಿ, ವಿದ್ಯಾದರ ಸಾಲಿ, ಬಿ.ಎಸ್. ಪಾಟೀಲ, ವಿ.ವಿ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ‘ಚಿತ್ರಕಲೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅದ್ಭುತ ಸಾಧನ, ಚಿತ್ರಕಲೆ ಮೂಲಕ ಸಮಾಜದಲ್ಲಿ ಜ್ಞಾನ ಹಾಗೂ ಅರಿವು ಮೂಡಿಸಬಹುದು, ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅರ್ಥಪೂರ್ಣ ಕಾಯಕ’ ಎಂದರು.

ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ, ಉದ್ಯಮಿ ಯಶವಂತ ಗುಗ್ಗರಿ, ಯುವ ಲಲಿತ ಕಲಾ ಸಂಸ್ಥೆಯ ಸಂಚಾಲಕಿ ಗಿರಿಜಾ ಬಿರಾದಾರ, ಕಾಜು ಶಿಂಗೆ, ಗಣೇಶ ನಾಶಿ, ಸಚೀನ ಚವ್ಹಾಣ, ಲಕ್ಷ್ಮಣ ಸಿಗ್ನಾಪೂರ, ಅಕ್ಷಯ ಪಾವನೆ, ಅಜಯ ಕೋಲಕಾರ, ನಿತೀನ ಕುಮಾರ ಬಬಲೇಶ್ವರ, ರಾಹುಲ ಬಬಲೇಶ್ವರ, ಹಾಜ್ಮಾ ಹುದ್ದಾರ, ಯುವ ಲಲಿತಕಲಾ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಅಗಸರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT