ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತಡೆಗೆ ಲಸಿಕೆಯೇ ಪರಿಹಾರ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Last Updated 8 ಮೇ 2021, 12:04 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ನಿಂದಬಹಳಷ್ಟು ಸಾವು ನೋವುಗಳಾಗುತ್ತಿವೆ. ಆಸ್ಪತ್ರೆಗಳ ಪರಿಸ್ಥಿತಿ ಭಯಾನಕವಾಗಿದೆ. ಆಕ್ಸಿಜನ್, ಇಂಜಕ್ಷನ್ ಕೊರತೆಯಾಗುತ್ತಿದೆ. ಕೋವಿಡ್‌ತಡೆಗಟ್ಟಲು ಲಸಿಕೆಯೇ ಪರಿಹಾರಿವಾಗಿದ್ದು, ಎಲ್ಲರು ಲಸಿಕೆ ಹಾಕಿಸಿಕೊಳ್ಳಬೇಕು ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳಮನವಿ ಮಾಡಿದರು.

ನಗರದ ಅಡಕಿ ಗಲ್ಲಿಯ ಆಯುರ್ವೇದ ಕಾಲೇಜು ಆವರಣ ಹಾಗೂ ಶಿರಾಳಶೆಟ್ಟಿ ಓಣಿಯ ಜಬರದಸ್ತ್‌ ಹನುಮಾನ ದೇವಸ್ಥಾನದ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ 45 ವರ್ಷ ಮೇಲ್ಪಟ್ಟವರು ಯಾರು ಲಸಿಕೆ ಪಡೆದುಕೊಂಡಿಲ್ಲವೋ ಅವರು ಲಸಿಕೆ ಪಡೆದುಕೊಳ್ಳಿ, ಈಗಾಗಲೇ ಕೋವಿಶೀಲ್ಡ್‌ ಲಸಿಕೆ ಪಡೆದಂತವರು 42 ದಿನ ಆಗಿದ್ದರೆ ಎರಡನೇ ಹಂತದ ಕೋವಿಶಿಲ್ಡ್‌ ಲಸಿಕೆ ಪಡೆಯಬಹುದು. ಕೋವ್ಯಾಕ್ಸಿನ್ ಲಸಿಕೆ ಪಡೆದಿದವರು 28 ದಿನ ಆಗಿದ್ದರೆ ಎರಡನೇ ಹಂತದ ಕೋವ್ಯಾಕ್ಸಿನ್ ಲಸಿಕೆಯನ್ನುಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗ ಸದ್ಯಕ್ಕೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಮುಂದಿನ ದಿನಗಳಲ್ಲಿ ಲಸಿಕೆ ಹಾಕಲಾಗುವುದು. ನಗರದ ಎಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿ, ಲಸಿಕೆ ಪಡೆದರೆ ಈ ರೋಗದಿಂದ ಆರೋಗ್ಯದಲ್ಲಿ ತೀರ್ವತರ ತೊಂದರೆಯಾಗುವುದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು.

ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಪಡೆಯಲು ಕೋವಿಡ್ ರೋಗಿಗಳಿರುತ್ತಾರೆ ಎಂದು ಭಯ ಪಟ್ಟು ಅಲ್ಲಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ವಿಜಯಪುರ ನಗರದಲ್ಲಿ ಈಗಾಗಲೇ ಸುಮಾರು 19 ಕಡೆಗಳಲ್ಲಿ ಈ ಲಸಿಕಾ ಅಭಿಯಾನ ಮಾಡಿದ್ದೇವೆ. ನಗರದಲ್ಲಿ ಲಸಿಕೆ ನೀಡುವ ಪ್ರಮಾಣ ಶೇ 55 ದಾಟಿದೆ. ವ್ಯಾಪಕವಾಗಿ ಜನರ ಸ್ಪಂದನೆ ಸಿಗುತ್ತಿದೆ ಎಂದರು.

ಇನ್ನೇನು 15 ದಿನಗಳಲ್ಲಿ 18 ವರ್ಷದಿಂದ 45 ವರ್ಷದವರಿಗೆ ಲಸಿಕೆ ನೀಡುವ ಪ್ರಕ್ರೀಯೆ ಪ್ರಾರಂಭವಾದರೆ ಮೇಅಂತ್ಯದವರೆಗೆ ಶೇ 90ರಷ್ಟು ವಿಜಯಪುರ ನಗರದ ಸಾರ್ವಜನಿಕರು ಲಸಿಕೆ ಪಡೆದ ನಗರವಾಗಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದ್ಯಸ್ಯರಾದ ಲಕ್ಷ್ಮಣ ಜಾಧವ್, ಸಿದ್ಧಸಿರಿ ಸೌಹಾರ್ದ ಸಹಕಾರಿ ನಿರ್ದೇಶಕ ವಿಜಯಕುಮಾರ ಚವ್ಹಾಣ, ಪಾಲಿಕೆ ಮಾಜಿ ಸದಸ್ಯರಾದ ಪರಶುರಾಮ ರಜಪೂತ, ರಾಹುಲ್ ಜಾಧವ್, ಚಂದ್ರು ಚೌಧರಿ, ಭೀಮು ಮಾಶ್ಯಾಳ, ದತ್ತಾ ಗೊಲಾಂಡೆ, ತುಳಸಿರಾಮ ಸೂರ್ಯವಂಶಿ, ಬಾಪೂಜಿ ನಿಕ್ಕಂ, ರಾಜು ಅನಂತಪೂರ, ರಾಜಶೇಖರ ಭಜಂತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT