ಸೋಮವಾರ, ಸೆಪ್ಟೆಂಬರ್ 20, 2021
28 °C

ವಚನಾಮೃತ: ನಾವು ಕುರಿಗಳಂತಾಗಬಾರದು

ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ Updated:

ಅಕ್ಷರ ಗಾತ್ರ : | |

Prajavani

ಆಧುನಿಕ ಜಗತ್ತಿನಲ್ಲಿ ಅನೇಕರಿಗೆ ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಅಂಥ ವ್ಯಕ್ತಿಗಳ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ನಮಗೆ ತಿಳಿಯುವುದು ಅವರಿನ್ನೂ ಪರಿಪಕ್ವವಾಗಿಲ್ಲ, ಆಳವಾಗಿ ಚಿಂತಿಸಿಲ್ಲ ಎಂದು.

ನನಗೊಂದು ಕಥೆ ನೆನಪಿಗೆ ಬರುತ್ತಿದೆ. ಒಬ್ಬ ಉಪಾಧ್ಯಾಯನು ಮಕ್ಕಳಿಗೆ ಅಂಕಗಣಿತ ಬೋಧಿಸುತ್ತಿದ್ದ. ಅವನೊಂದು ಲೆಕ್ಕವನ್ನು ಬಿಡಿಸಲು ಹೇಳಿದ. ನನ್ನ ಹತ್ತಿರ 12 ಕುರಿಗಳಿವೆ. ಅವುಗಳಲ್ಲಿ ಆರು ಬೇಲಿ ಹಾರಿಹೋದವು, ಉಳಿದದ್ದೆಷ್ಟು? ಅನೇಕ ಮಕ್ಕಳು ‘ಆರು’ ಎಂದರು. ಆದರೆ, ರೈತನ ಮಗನೊಬ್ಬ ಮೆತ್ತಗೆ ಹೇಳಿದ, ‘ಒಂದೂ ಉಳಿಯುವುದಿಲ್ಲ’ ಎಂದು. ಉಪಾಧ್ಯಾಯ ಹುಡುಗನನ್ನು ಅದು ಹೇಗೆಂದು ಪ್ರಶ್ನಿಸಿದಾಗ ಅವನೆಂದ, ಸಾರ್, ನಿಮಗೆ ಗಣಿತ ಗೊತ್ತಿರಬಹುದು. ಆದರೆ, ಕುರಿಗಳ ವಿಚಾರ ನನಗೆ ಗೊತ್ತು ಎಂದ. ಅಂದರೆ, ನಾವು ಕುರಿಗಳಂತೆ ಇನ್ನೊಬ್ಬರನ್ನು ಅನುಸರಿಸಬಾರದು.

‌ಈ ‘ಜಡ’ವಾದ ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ. ಇಂತಹವರಿಗೆ ಚಾರ್ವಾಕರು ಎಂದು ಹೇಳಲಾಗುತ್ತದೆ. ಇವರ ಪ್ರಕಾರ ದೇವರು, ಆತ್ಮ, ಅಮೃತತ್ವ ಇವೆಲ್ಲ ಸುಳ್ಳು. ಜೀವನದ ಮುಖ್ಯ ಉದ್ದೇಶ ಇಂದ್ರಿಯ ಸುಖಃ ಆದ್ದರಿಂದಲೇ ನಮ್ಮಲ್ಲನೇಕರು ಧರ್ಮ-ಧರ್ಮ ಎಂದು ಹೇಳುತ್ತಾರೆ ಅಷ್ಟೇ. ಆದರೆ, ನಿಜವಾಗಿಯೂ ಅವರು ಅನುಸರಿಸುವುದು ಜಡವಾದಿಯ ಜೀವನವನ್ನೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.