ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿ ಜಲಾಶಯ: ಒಳಹರಿವು ಆರಂಭ

ಚಂದ್ರಶೇಖರ ಕೋಳೇಕರ
Published 8 ಜೂನ್ 2024, 6:26 IST
Last Updated 8 ಜೂನ್ 2024, 6:26 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದು, ಈ ವರ್ಷದ ಮೊದಲ ಒಳಹರಿವು ಶುಕ್ರವಾರ ದಾಖಲಾಗಿದೆ.

1,768 ಕ್ಯುಸೆಕ್ ಒಳಹರಿವು ಶುಕ್ರವಾರ ಜಲಾಶಯಕ್ಕೆ ಹರಿದು ಬಂದಿದ್ದು, ಕೃಷ್ಣಾ ನದಿ ಪಾತ್ರದ ಜನರ ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಜುಲೈ 13ಕ್ಕೆ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿತ್ತು. ಇದರಿಂದ ನೀರು ಬರುತ್ತದೆಯೋ ಇಲ್ಲವೋ ಎಂಬ ಆತಂಕ ತಕ್ಕ ಮಟ್ಟಿಗೆ ದೂರವಾಗಿದೆ.

ನೀರಿಲ್ಲದೇ ಬಣಗುಡುತ್ತಿದ್ದ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿರುವುದು ಎಲ್ಲರಲ್ಲಿಯೂ ಸಂತಸ ಮೂಡಿಸಿದೆ.
2002 ರಿಂದ ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹ ಆರಂಭಗೊಂಡಿತ್ತು. ಅಲ್ಲಿಂದ ಕಳೆದ ವರ್ಷ ಅತ್ಯಂತ ತಡವಾಗಿ ಅಂದರೇ ಜುಲೈ 13 ರಿಂದ ಒಳಹರಿವು ಆರಂಭಗೊಂಡಿತ್ತು.

ರೈತರ ನಿರೀಕ್ಷೆ: ಜಲಾಶಯಕ್ಕೆ ಕಳೆದ ವರ್ಷ ಕಡಿಮೆ ನೀರು ಬಂದ ಕಾರಣ, ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶದಿಂದ ನೀರಾವರಿಗಾಗಿ ಹಿಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಬಿಟ್ಟಿರಲಿಲ್ಲ. ಈಗ ಜೂನ್‌ನಲ್ಲಿಯೇ ಒಳಹರಿವು ಬಂದಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗೆ ನೀರು ಬಿಡುವ ಆಶಾಭಾವ ರೈತರಲ್ಲಿ ಮೂಡಿದೆ.
ಕಳೆದ ವರ್ಷ ಮಳೆಯ ಅಭಾವ, ನೀರಿನ ಬರ ಅನುಭವಿಸದ ರೈತರಿಗೆ ಈ ಬಾರಿ ಮುಂಗಾರು ಮಳೆ ಕೈ ಹಿಡಿಯುವ ಲಕ್ಷಣಗಳಿವೆ.

ನೀರಿನ ಸಂಗ್ರಹದ ಮಾಹಿತಿ: 519.60 ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ 507.79 ಮೀ ವರೆಗೆ ನೀರು ಇತ್ತು. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ ಶುಕ್ರವಾರ 20.654 ಟಿಎಂಸಿ ಅಡಿ ನೀರು ಇದೆ. ಡೆಡ್ ಸ್ಟೋರೇಜ್ ನೀರು ಹೊರತುಪಡಿಸಿ ಸುಮಾರು 3 ಟಿಎಂಸಿ ಅಡಿ ಲೈವ್ ಸ್ಟೋರೇಜ್ ನೀರಿದೆ. 1768 ಕ್ಯುಸೆಕ್ ಒಳಹರಿವು ಇದೆ. ಕಳೆದ ವರ್ಷ ಇದೇ ದಿನದಂದು (7/6/2023) ರಂದು ಜಲಾಶಯದಲ್ಲಿ 507.88 ಮೀವರೆಗೆ ನೀರು ಸಂಗ್ರಹಗೊಂಡು, 20.973 ಟಿಎಂಸಿ ಅಡಿ ನೀರಿತ್ತು.

ತಾತ್ಕಾಲಿಕ ಒಳಹರಿವು: ಆಲಮಟ್ಟಿ ಹಿನ್ನೀರಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ‌ ಮಳೆ ಬರುತ್ತಿರುವ ಕಾರಣ ಈಗ ಒಳಹರಿವು ಬರುತ್ತಿದೆ. ಮಹಾರಾಷ್ಟ್ರದಿಂದ ಬಿಟ್ಟ ನೀರು ಇದಲ್ಲ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಕೃಷ್ಣಾ ನದಿ ಪಾತ್ರಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಬಳಿ ಕೇವಲ 800 ಕ್ಯುಸೆಕ್ ಒಳಹರಿವು ಇದೆ. ಅದು ಆಲಮಟ್ಟಿಗೆ ತಲುಪುವುದಿಲ್ಲ, ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಿದ್ದು, ಕೊಯ್ನಾದಲ್ಲಿ 2.1 ಸೆಂ.ಮೀ, ಮಹಾರಾಷ್ಟ್ರದಲ್ಲಿ 1.2 ಸೆಂ.ಮೀ, ನವಜಾದಲ್ಲಿ 1.4 ಸೆಂ.ಮೀ, ವಾರಣಾದಲ್ಲಿ 3.3 ಸೆಂ.ಮೀ, ಕನ್ಹೇರದಲ್ಲಿ 3.5 ಸೆಂ.ಮೀ ಮಳೆಯಾಗಿದೆ. ಅಲ್ಲಿ ಕನಿಷ್ಠ 20 ಸೆಂ.ಮೀ.ವರೆಗೆ ಮಳೆಯಾದರೇ ಮಾತ್ರ ಮಹಾರಾಷ್ಟದಿಂದ ನೀರು ಬಿಡಲು ಆರಂಭಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ‌ ನೀಡಿದರು.

ಅಲ್ಲಿಯ ಪ್ರಮುಖ ಕೊಯ್ನಾ ಅಣೆಕಟ್ಟು ಕೇವಲ ಶೇ 14ರಷ್ಟು, ಧೋಮ ಅಣೆಕಟ್ಟು ಶೇ 33 ರಷ್ಟು ಮಾತ್ರ ಭರ್ತಿಯಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನ ಹಿಪ್ಪರಗಿ ಜಲಾಶಯದಲ್ಲಿಯೂ ನೀರಿನ ಕೊರತೆಯಿದೆ. ಅದು ಇನ್ನೂ ಡೆಡ್ ಸ್ಟೋರೇಜ್ ಮಟ್ಟ ತಲುಪಿಲ್ಲ. ಅಲ್ಲಿಂದಲೂ ನೀರು ಹೊರಕ್ಕೆ ಬಿಟ್ಟಿಲ್ಲ. ಹೀಗಾಗಿ ಅಲ್ಲಿಯ ನೀರು ಅಲಮಟ್ಟಿಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡ ದಿನ
2019-20 ನೇ ಸಾಲು;3–7–2019‌
2020-21 ನೇ ಸಾಲು;5–6–2020
2021-22 ನೇ ಸಾಲು;23–5–2021
2022-23 ನೇ ಸಾಲು;21–5–2021
2023-24 ನೇ ಸಾಲು;13–7–2023
2024-25 ನೇ ಸಾಲು;7–6–2024

ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರದಿಂದ ಒಳಹರಿವು ಆರಂಭಗೊಂಡಿದ್ದು ಹಿನ್ನೀರಿನ ಪ್ರದೇಶ ಶುಕ್ರವಾರ ಕಂಡಿದ್ದು ಹೀಗೆ (ಚಿತ್ರ; ಚಂದ್ರಶೇಖರ ಕೋಳೇಕರ)

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಬೇಗನೆ ಆರಂಭಗೊಂಡಿದ್ದು ಸಂತಸ ತಂದಿದೆ

- ಮಲ್ಲನಗೌಡ ಬಿರಾದಾರ ರೈತ ಕಿರಿಶ್ಯಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT