ಆಲಮೇಲ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರನ್ನು ಭೀಮಾ ನದಿಗೆ ಹರಿಬಿಟ್ಟ ಪರಿಣಾಮದಿಂದಾಗಿ ಆಲಮೇಲ ತಾಲ್ಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ಗೆ ಸದ್ಯ 47,690 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಕೆಎನ್ಎನ್ಎಲ್ ಎಇಇ ಸಂತೋಷಕುಮಾರ ಸಜ್ಜನ್ ಮಾಹಿತಿ ನೀಡಿದ್ದಾರೆ.

ಸೊನ್ನ ಬ್ಯಾರೇಜ್ನ ಒಟ್ಟು ಸಂಗ್ರಹ ಸಾಮರ್ಥ್ಯ 3.166 ಟಿಎಂಸಿ ಇದ್ದು ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಬ್ಯಾರೆಜ್ನ 24 ಗೇಟ್ಗಳ ಮೂಲಕ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ಹೀಗಾಗಿ ಸೊನ್ನ ಬ್ಯಾರೇಜ್ ಕೆಳಗಡೆ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ.

ಆದ್ದರಿಂದ ತಾಲ್ಲೂಕಿನ ನದಿ ತೀರದ ದೇವಣಗಾಂವ, ಶಂಬೇವಾಡ, ಕಡ್ಲೇವಾಡ, ಕುಮಸಗಿ , ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರು ರೈತರು ಜಾಗೃತವಾಗಿ ಇರಬೇಕು. ಸದ್ಯ ಭೀಮಾ ನದಿಯಲ್ಲಿಗ ಪ್ರವಾಹ ಪರಿಸ್ಥಿತಿ ಇಲ್ಲ. ಆದಾಗ್ಯೂ ಕೂಡ ಸಾರ್ವಜನಿಕರು ಅನಾವಶ್ಯಕ ನದಿ ಪಾತ್ರಕ್ಕೆ ಹೋಗುವುದು, ನದಿಯಲ್ಲಿ ಮೀನು ಹಿಡಿಯುವುದು, ಈಜುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.