ಗುರುವಾರ , ಸೆಪ್ಟೆಂಬರ್ 23, 2021
22 °C
‘ಪ್ರಜಾವಾಣಿ’ಯಿಂದ ವಿಶ್ವ ಪತ್ರಿಕಾ ವಿತರಕರ ದಿನ ಆಚರಣೆ

ವಿಜಯಪುರ: ಮುಂಜಾನೆಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ ಪತ್ರಿಕಾ ವಿತರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಪ್ರಜಾವಾಣಿ’ ಪತ್ರಿಕೆ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಪತ್ರಿಕಾ ವಿತರಕರ ದಿನ’ದ ಅಂಗವಾಗಿ ಕೇಕ್‌ ಕತ್ತರಿಸಿ, ಸಿಹಿ ವಿತರಿಸಿ ಪತ್ರಿಕಾ ವಿತರಕರಿಗೆ ಶುಭ ಕೋರಲಾಯಿತು.

ಪತ್ರಿಕಾ ವಿತರಕರ ದಿನಾಚರಣೆ ಹಿನ್ನೆಲೆಯಲ್ಲಿ ಗಾಂಧಿ ವೃತ್ತದಲ್ಲಿ ವಿತರಕರು ನಸುಕಿನ 5 ಗಂಟೆಗೆ ಜೊತೆಗೂಡಿ ಸಂಭ್ರಮಿಸಿದರು.

ತಮ್ಮ ವೃತ್ತಿಯ ಕಷ್ಟಸುಖಃದ ಕುರಿತು ಪರಸ್ಪರ ಚರ್ಚಿಸಿದರು. ಸರ್ಕಾರದಿಂದ ಲಭಿಸಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸುವ ಸಲುವಾಗಿ ವಿತರಕರ ಸಂಘ ಆರಂಭಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಿಕಾ ಏಜೆಂಟರು ಹಾಗೂ ವಿತರಕರು ಸಲಹೆ ನೀಡಿದರು. ಪರಸ್ಪರ ಶುಭಾಷಯ ವಿನಿಮಯದ ಬಳಿಕ ಎಂದಿನಂತೆ ತಮ್ಮ ಕಾರ್ಯಕ್ಕೆ ತೆರಳಿದರು.

‘ಪ್ರಜಾವಾಣಿ’ ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಬಸಪ್ಪ ಮಗದುಮ್‌, ಹಿರಿಯ ಪತ್ರಿಕಾ ಏಜೆಂಟ್‌ ಸುರೇಶ ಕಲಾದಗಿ, ಶಿವಾನಂದ ಹೂಗಾರ, ಮಲ್ಲಪ್ಪ ಮಂಗಾನವರ, ಪತ್ರಿಕಾ ವಿತರಕರಾದ ಮಲ್ಲಿಕಾರ್ಜುನ ಹಳ್ಳದ, ವಿಜಯ ಮರಡಿ, ಸಿದ್ದು ತಾಳಿಕೋಟಿ, ದಯಾನಂದ ಶಿರಶ್ಯಾಡ, ಶ್ರೀಕಾಂತ ಪಾಟೀಲ, ಮಾಳಪ್ಪ ಕಲಾದಗಿ, ರಸೂಲ್‌ ಸಾಬ್‌ ಹಂಡರಗಲ್‌, ಶಿವರಾಜ ಪಾಟೀಲ, ರಾಮು ಪಾಟೀಲ, ಸೀತಾರಾಮ ಕುಲಕರ್ಣಿ, ರಾಜು ಪಾತಂಗೆ, ಮಹೇಶ ಬಡಿಗೇರ, ಮೌನೇಶ ಬಡಿಗೇರ, ರಾಜಾಪುರ, ನಾಗೇಶ ವಳಸಂಗ, ಅಶೋಕ ಹುಲ್ಯಾಳ, ಸುನೀಲ್ ಝಿಪ್ರೆ, ಸಂಬಣ್ಣಿ, ಶಿವಾನಂದ ಹಳಕಟ್ಟಿ, ಐ.ಜಿ.ಸ್ವಾಮಿ, ಆನಂದ, ಶಿವಕುಮಾರ ಕರಜಗಿ, ಬಷೀರ ಅಹ್ಮದ್‌, ಕಿರಣ ಅಗಸರ, ಸುರೇಶ ಹಳ್ಳಿ, ಪ್ರಸಾದ್, ಬಾಪು ಬಿರಾದಾರ, ಆನಂದ ಗಡ್ಯಾಪ್ಪ, ಚನ್ನು, ಶ್ರೀಶೈಲ ಮುಂಜಾನೆ, ರಮೇಶ ಕುರ್ಲೆ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು