ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಪೂಜ್ಯ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂದು ಪ್ರಾರಂಭಗೊಂಡ ಯೋಗ ಸಪ್ತಾಹ ಒಂಬತ್ತು ದಿನಗಳ ಬಳಿಕ ಭಾನುವಾರ ಸಂಪನ್ನಗೊಂಡಿತು.

ಯಾದಗಿರಿ ಜಿಲ್ಲೆಯ ಗೋಗಿ ಜ್ಞಾನಯೋಗ ಮಂದಿರದ ಯೋಗಿ ಜಯಗುರುದೇವ ಸ್ವಾಮೀಜಿ ಗಳಿಂದ ಪ್ರತಿನಿತ್ಯ ಬೆಳಿಗ್ಗೆ-ಸಾಯಂಕಾಲ ಅಷ್ಟಾಂಗ ಯೋಗ ಮತ್ತು ಪ್ರಣವ ಧ್ಯಾನ ಯೋಗ ತರಬೇತಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಶಾಖೆ ಅಧ್ಯಕ್ಷ ಅಶೋಕ ವಾರದ ಯೋಗ ಶಿಬಿರಾರ್ಥಿಗಳಾಗಿ ಅನಿಸಿಕೆ ವ್ಯಕ್ತಪಡಿಸಿದರು.

ಯೋಗ ಗುರು ಜಯಗುರುದೇವ ಸ್ವಾಮೀಜಿ ಗೌರವ ಸ್ವೀಕರಿಸಿ ಯೋಗ ನಿತ್ಯ ಮುಂದುವರೆಸಿಕೊಂಡು ಆರೋಗ್ಯವಂತರಾಗುವಂತೆ ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪ್ರಭು ಸಾರಂಗದೇವ ಶಿವಾಚಾರ್ಯರು, ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಸಂಸ್ಥೆಯ ನಿರ್ದೇಶಕರಾದ ಗಂಗಾಧರ ಜೋಗೂರ, ಹ.ಮ.ಪೂಜಾರ, ಅಶೋಕ ಮಸಳಿ, ವಿವೇಕಾನಂದ ಸಾಲಿಮಠ ಹಾಗೂ ಆಡಳಿತಾಧಿಕಾರಿ ಬಿ.ಜಿ.ಮಠ ಮುಖ್ಯ ಅತಿಥಿಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.