ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳು ಬರ್ತಿ ರೈತರ ಮೊಗದಲ್ಲಿ ಮಂದಹಾಸ

Last Updated 3 ನವೆಂಬರ್ 2017, 9:31 IST
ಅಕ್ಷರ ಗಾತ್ರ

ಇಂಡಿ: ರಾಜಕೀಯ ಎನ್ನುವದು ಇಂದು ಇರಬಹುದು ನಾಳೆ ಇರಲ್ಲಿಕ್ಕಿಲ್ಲ. ಇರುವ ದಿನಗಳಲ್ಲಿ ಸಾರ್ವಜನಿಕ ರಂಗದಲ್ಲಿ ನಾವು ಮಾಡಿದ ಕೆಲಸ ಕಾರ್ಯಗಳು ಜೀವಂತವಾಗಿರುತ್ತವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಅಣಚಿ ಪ್ಯಾಕೇಜ್ ವ್ಯಾಪ್ತಿಯಲ್ಲಿ ಬರುವ ಹೊರ್ತಿ, ಗುಂದವಾನ, ಕಪನಿಂಬರಗಿ, ಅರ್ಜನಾಳ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮನುಷ್ಯ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಅಂದರೇ ಭೂಮಿ ಮೇಲೆ ಜನ್ಮತಾಳಿದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಈಗಾಗಲೇ ಒಟ್ಟು 17 ಕೆರೆಗಳು ತುಂಬಲಾಗಿದ್ದು, ಅಣಚಿ ಭಾಗದಲ್ಲಿ 9 ಕೆರೆಗಳು, ಭುಯ್ಯಾರ ಎಂಟು ಕೆರೆಗಳನ್ನು ತುಂಬಲಾಗಿದೆ. ಮುಂದಿನ ದಿನಗಳಲ್ಲಿ ಮರಗೂರ ಗ್ರಾಮದ ಬಳಿ ಲಿಪ್ಟ ಮೂಲಕ ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡಲಾಗುವದು. ಹಂಜಗಿ ಗ್ರಾಮದ ಕೆರೆ ತುಂಬಿರುವದರಿಂದ ಆ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕೆರೆಯ ಸುತ್ತಮುತ್ತಲೂ ಅಂತರ್ಜಲ ಹೆಚ್ಚಾಗಿದೆ. ಬತ್ತಿ ಹೋಗಿದ್ದ ಕೊಳವೇ ಬಾವಿಗಳಿಗೆ ನೀರು ಬಂದಿದೆ ಎಂದರು.

ಹೊರ್ತಿ ಕರೆಯಲ್ಲಿ 18.02 ಹೆಕ್ಟರ್ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈ ನೀರಿನಿಂದ 131 ಹೆಕ್ಟರ್ ಪ್ರದೇಶಕ್ಕೆ, ಗುಂದವಾನ ಸೈಟ್ ನಂಬರ 1 ರಲ್ಲಿ 130 ಹೆಕ್ಟರ್ ಪ್ರದೇಶದಲ್ಲಿ ನೀರು ನಿಲ್ಲುವ ಸಾಮರ್ಥ್ಯವಿದ್ದು 505 ಹೆಕ್ಟರ್ ಪ್ರದೇಶಕ್ಕೆ ನೀರುಣಿಸಬಹುದು. ಗುಂದವಾನ ಸೈಟ್ ನಂಬರ 2 ರಲ್ಲಿ 70.82 ಹೆಕ್ಟರ್ ಪ್ರದೇಶದಲ್ಲಿ ಸಂಗ್ರಹಗೊಳ್ಳುವ ನೀರಿನಿಂದ 443 ಹೆಕ್ಟರ್ ಪ್ರದೇಶಕ್ಕೆ, ಅರ್ಜನಾಳ ಕೆರೆಯಲ್ಲಿ ನಿಲ್ಲುವ 102.04 ಕ್ಯುಸೆಕ್ ನೀರಿನಿಂದ 774 ಹೆಕ್ಟರ್ ಪ್ರದೇಶಕ್ಕೆ ನೀರುಣಿಸಬಹುದು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಬಹುದಿನಗಳಿಂದ ನೀರಾವರಿ ವಂಚಿತವಾದ ಪ್ರದೇಶಗಳಿಗೆ ನೀರಾವರಿಗೆ ಒಳಪಡಿಸುವದು, ನೆನಗುದಿಗೆ ಬಿದ್ದಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಎಂಬ ಸಕಲ್ಪದಂತೆ ಎರಡೂ ಭರವಸೆಗಳು ಇಡೇರಿಸಿದ್ದೇನೆ. ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಭರದಿಂದ ಸಾಗುತ್ತಿದ್ದು 31 ಗ್ರಾಮಗಳ ಪೈಕಿ 28 ಗ್ರಾಮಗಳಿಗೆ ನೀರು ಪೂರೈಸಲಾಗಿದೆ. ಇನ್ನುಳಿದ ಗ್ರಾಮಗಳಿಗೆ ರೈಲ್ವೆ ಲೈನ್ ಅಡ್ಡ ಬರುವದರಿಂದ ಕಾರ್ಯ ವಿಳಂಭವಾಗಿದ್ದು. ಶೀಘ್ರದಲ್ಲಿಯೇ ಮಾಡಲಾಗುವದು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾದೇವ ಪೂಜಾರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರುಕ್ಮುದೀನ ತದ್ದೇವಾಡಿ, ಎ.ಪಿ.ಎಂ.ಸಿ ಅಧ್ಯಕ್ಷ ಜಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ ,ಧರ್ಮು ವಾಲಿಕಾರ, ಮಹೇಶ ಹೊನ್ನಬಿಂದಗಿ, ಮಹಾದೇವ ಲೋಣಿ, ಮಲ್ಲಪ್ಪ ಭೂಸಗಿ, ಮಹಾದೇವ ಹೊನಮೋರೆ, ಶಿವಪ್ಪ ಬೋಳಗಿ , ಗೊಲ್ಲಾಳಪ್ಪ ಲೋಣಿ, ವಿಠ್ಠಲ ಠೋಕೆ, ಬಸಪ್ಪ ಲೋಣಿ, ಅಶೋಕ ಪೂಜಾರಿ, ಅಶೋಕ ಪಾಟೀಲ, ಬಿ.ಬಿ ಬಿರಾದಾರ, ಕೆ.ಬಿ.ಜೆ.ಎನ್.ಎಲ್ ಅಧಿಕಾರಿ ಹೊಸಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT