ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಮರಿಗೆ ಕಾಂಗ್ರೆಸ್‌ ಸ್ಥಾನಮಾನ ನೀಡಿಲ್ಲ’

Last Updated 25 ಮೇ 2017, 8:36 IST
ಅಕ್ಷರ ಗಾತ್ರ

ಕುದರಿಸಾಲವಾಡಗಿ (ಬಸವನ ಬಾಗೇವಾಡಿ): ‘ಸ್ವಾತಂತ್ರ್ಯ ಪೂರ್ವದಲ್ಲಿ ಶೇ 33 ರಷ್ಟು  ಮುಸ್ಲಿಮರು ಶಿಕ್ಷಣ ವಂತರಾಗಿದ್ದರು. ಸ್ವಾತಂತ್ರ್ಯ ನಂತರದಲ್ಲಿ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿ ದಿದ್ದಾರೆ. ಇದಕ್ಕೆ ದೇಶದಲ್ಲಿ ಕಳೆದ 60 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರಸ್‌ ಸರ್ಕಾರವೇ ಕಾರಣ’ ಎಂದು ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ತಾರ ಪಠಾಣ ಆರೋಪಿಸಿದರು.

ಗ್ರಾಮದಲ್ಲಿ ಪಕ್ಷದ ದೇವರಹಿಪ್ಪರಗಿ ಮತಕ್ಷೇತ್ರದ ಅಲ್ಪಸಂಖ್ಯಾತರ ಕಾರ್ಯಕಾರಿಣಿ  ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ  ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಮುನ್ನಡೆಸುವ ಸಲುವಾಗಿ ಕಟ್ಟಿದ ಪಕ್ಷವಾಗಿದೆ. ಆದರೆ ಸ್ವಾತಂತ್ರ್ಯ ನಂತರ ಅದನ್ನು ರಾಜಕೀಯ ಪಕ್ಷ ವನ್ನಾಗಿ ಮಾಡಿದ ಕಾಂಗ್ರೆಸ್ ಮುಖಂಡರು ಮುಸ್ಲಿಮರಿಗಾಗಿ ಯಾವುದೇ ಸ್ಥಾನಮಾನ ನೀಡಿಲ್ಲ’ ಎಂದು ಟೀಕಿಸಿದರು.

‘ಕಾಂಗ್ರೆಸ್    ಹಿಂದೂ–ಮುಸ್ಲಿಮರಲ್ಲಿ ಭೇದ ತರುವಂತಹ ಕೆಲಸ ಮಾಡಿದೆ. ಕಾಂಗ್ರೆಸ್‌  ಮುಸ್ಲಿಮರಿಗೆ ನೀಡಿದ ಕೊಡುಗೆ ಶೂನ್ಯ’ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿ ಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯ ಕೆಲಸ ಮಾಡಬೇಕಿದೆ ಎಂದು ಹೇಳಿದರು.
 
ಬಿಜೆಪಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯ ದರ್ಶಿ ರಫೀಕ್‌ ಪೀರಜಾದೆ ಮಾತನಾಡಿ ದರು. ಬಿಜೆಪಿ ಜಿಲ್ಲಾ ಘಟಕದ ಉಪಾ ಧ್ಯಕ್ಷ ರಾಜುಗೌಡ ಪಾಟೀಲ (ಕುದರಿ ಸಾಲ ವಾಡಗಿ), ಸೋಮನಗೌಡ ಪಾಟೀಲ (ಸಾಸನೂರ) ಮಾತನಾಡಿ ದರು. ಡಾ.ಇಬ್ರಾಹಿಂ ಬಳಗಾರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಘಟಕದ ಅಧ್ಯಕ್ಷ ಶಹಜನಾ ಮುಲ್ಲಾ, ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಬಿರಾದಾರ, ತಾ.ಪಂ ಸದಸ್ಯ ಜಾಕೀರ ಹುಸೇನ ಶಿವಣಗಿ, ಮುಖಂಡ ರಾದ ಯೂಸುಫ್‌ ಜೋಶೇಫ್,ಫಿರೋಜ ಮನಿಯಾರ, ಇಕ್ಬಾಲ ಮೂಲಿಮನಿ, ಬಂದೇನವಾಜ ಕತ್ನಳಿ ,ಮಹಿಬೂಬ ಇನಾಮದಾರ ಇದ್ದರು.  ಸಾಯಬಣ್ಣ ಬಾಗೇವಾಡಿ ಸ್ವಾಗತಿಸಿ, ಭೀಮನಗೌಡ ಲಚ್ಯಾಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT