ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆ: ತಾತ್ಸಾರ ಬೇಡ’

ನಾಲತವಾಡ: ಶಾಲಾ ಪ್ರಾರಂಭೋತ್ಸವ; ಮಕ್ಕಳಿಗೆ ಸಿಹಿ ಹಂಚಿಕೆ
Last Updated 30 ಮೇ 2018, 10:20 IST
ಅಕ್ಷರ ಗಾತ್ರ

ನಾಲತವಾಡ: ‘ಸರ್ಕಾರಿ ಶಾಲೆಗಳೆಂದು ತಾತ್ಸಾರ ಮಾಡದಿರಿ. ಸರ್ಕಾರಿ ಶಾಲೆಗಳಲ್ಲಿ ಕಲಿತಂತಹ ಬಹುತೇಕರಿಂದು ಬಹುದೊಡ್ಡ ಹುದ್ದೆಗಳಲ್ಲಿದ್ದು ನಮಗೆಲ್ಲ ಮಾದರಿಗಳಾಗಿದ್ದಾರೆ’ ಎಂದು ಸಿ.ಆರ್‌.ಪಿ.ಎಂ.ಬಿ. ಚಲುವಾದಿ ‌ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ದೇಶಮುಖರ ಓಣಿ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.

‘ನಮ್ಮ ನಾಲತವಾಡ ವಲಯದ ಕಿರಿಯ ಪ್ರಾಥಮಿಕ ಶಾಲೆಗಳಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆ ಇದಾಗಿದೆ. ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇಂಥ ಶಾಲೆ ಇತರೇ ಶಾಲೆಗಳಿಗೆ ಮಾದರಿಯಾಗಿದೆ’ ಎಂದು ಹೇಳಿದರು.

‘ಸರ್ಕಾರದ ಸವಲತ್ತುಗಳನ್ನು ಪಡೆಯಲು ನಾವು ಹೇಗೆ ಹವಣಿಸುತ್ತೇವೆಯೋ ಹಾಗೆಯೇ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳಲ್ಲೇ ಮಕ್ಕಳನ್ನು ಕಲಿಸುವ ದೃಢ ಸಂಕಲ್ಪ ಮಾಡಬೇಕು’ ಎಂದು ಕರೆ ನೀಡಿದರು.

ಮುಖ್ಯಗುರುಗಳಾದ ಮಲ್ಲಿಕಾರ್ಜನ ಗಡೇದರವರು ಮಾತನಾಡಿ ‘ನಮ್ಮ ಶಾಲೆಯಲ್ಲಿ ಓದಿದ ಬಹುತೇಕ ಮಕ್ಕಳು ಇಂದು ನವೋದಯ, ಮೊರಾರ್ಜಿ, ಸೈನಿಕ ಶಾಲೆಗಳಲ್ಲಿ ಕಲಿಯುತ್ತಿದ್ದು ನಮ್ಮ ಶಾಲೆಯು ಖಾಸಗಿ ಶಾಲೆಗಳಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಇದಕ್ಕೆ ನಮ್ಮ ಶಿಕ್ಷಕರಾದ ಮ.ವೀ. ಸಜ್ಜನರಂತಹವರ ಶ್ರಮವೇ ಕಾರಣ’ ಎಂದು ನುಡಿದರು.

ಶಾಲೆಯ ಏಳಿಗೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಗೋದಾವರಿ ರುದ್ರಗಂಟಿ ಪಾತ್ರ ಪ್ರಮುಖವಾದದ್ದು. ಉಪಾಧ್ಯಕ್ಷ ಬಸವರಾಜ ಕಾಳಗುಂಡಿಯವರ ಸಹಕಾರವನ್ನು ಪಟ್ಟಣ ಪಂಚಾಯ್ತಿ ಸದಸ್ಯೆ ಬಸಲಿಂಗಮ್ಮ ಮಸ್ಕಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಖಾಜಾಬಿ ಜಾಲಗಾರ, ದಿಲ್ಶಾದ್‌ ಬೀದರಕೋಟಿ, ಯಮನೂರಿ ಗುರಿಕಾರ , ಹಮೀದ್‌ ಇಸ್ಲಾಂಪೂರ , ಖಾಜೇಸಾಬ್‌ ನವಲಿ, ಅಬ್ದುಲ್‌ ರಜಾಕ್‌ ಗಂಗೂರ, ಕಲಾವತಿ ಪ್ಯಾಟಿಗೌಡ್ರ, ಅಂಭಾಜಿ ಘನಾತೆ, ಮೈರುನಬಿ ಸುಗಂಧಿ ಶಿಕ್ಷಕಿ ಮ. ವೀ. ಸಜ್ಜನ ಇದ್ದರು

‌ಓಣಿಯ ಹಿರಿಯರಾದ. ಶಿವಪ್ಪ ಬ ಮೇಗಲಮನಿ, ಚಂದಾಸಾಬ್ ಜಾಲಗಾರ‌ ಮಹಿಬೂಬ ಬಿದರಕೋಟಿ, ಶಿಕ್ಷಕರಾದ ಮಹಾಂತೇಶ ನೂಲಿನವರ ನಿರೂಪಿಸಿ ವಂದಿಸಿದರು.

ಪಟ್ಟಣದ ಹೆಣ್ಣುಮಕ್ಕಳ ಶಾಲೆ, ಜಗದೇವನಗರ, ಗಂಗಾಧರ ನಗರ ಶಾಲೆ, ಗಂಡುಮಕ್ಕಳ ಶಾಲೆ, ವಿನಾಯಕ ನಗರ, ರಡ್ಡೇರ ಪೇಟೆ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.

ಲೊಟಗೇರಿ, ಬಿಜ್ಜೂರ -ಖಾನೀಕೇರಿ, ರಕ್ಕಸಗಿ , ಘಾಳಪೂಜಿ, ವೀರೇಶ ನಗರ, ನಾಗಬೇನಾಳ ಎಲ್ಟಿಗಳಲ್ಲೂ ಶಾಲಾ ಪ್ರಾಂಭೋತ್ಸವವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪಾಲಕರು, ಮಕ್ಕಳೊಡಗೂಡಿ ಗ್ರಾಮದಾದ್ಯಂತ ಮೆರವಣಿಗೆ ನಡೆಸಿದರು. ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT