ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರೆಂಟ್‌

7

ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರೆಂಟ್‌

Published:
Updated:

ರಾಮನಗರ: ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌್ ನ್ಯಾಯಾಲಯವು ಗುರುವಾರ ಜಾಮೀನು ರಹಿತ ವಾರೆಂಟ್‌ ಹೊರಡಿಸಿತು.

ಕಳೆದ ಮೂರು ವಿಚಾರಣೆಗಳಿಗೆ ನಿತ್ಯಾನಂದ ಸತತ ಗೈರಾಗಿದ್ದರು. ಕಳೆದ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಖುದ್ದು ಹಾಜರಿಗೆ ನ್ಯಾಯಾಲಯವು ಸೂಚಿಸಿತ್ತು. ಆದಾಗ್ಯೂ ಗುರುವಾರ ನ್ಯಾಯಾಲಯಕ್ಕೆ ಗೈರಾದ ಕಾರಣ ನಿತ್ಯಾನಂದ ವಿರುದ್ಧ ನ್ಯಾಯಾಧೀಶ ಗೋಪಾಲಕೃಷ್ಣ ರೈ ವಾರೆಂಟ್ ಹೊರಡಿಸಿದರು. ಪ್ರಕರಣದ ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಲಾಯಿತು.

ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್‌ ಕುರುಪ್ಪನ್‌ ವಿಚಾರಣೆಯು ಸದ್ಯ ಕ್ಯಾಮೆರಾ ಪ್ರೊಸಿಡಿಂಗ್ ಮೂಲಕ ನಡೆದಿದೆ. ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಜಿಲ್ಲಾ ನ್ಯಾಯಾಲಯಕ್ಕೆ ಕೆಲವು ತಿಂಗಳ ಹಿಂದೆ ಸೂಚನೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !