ವಿಜ್ಞಾನ ಬಸ್:
1993ರಲ್ಲಿ ‘ಮ್ಯೂಸಿಯಂ ಆನ್ ವೀಲ್ಸ್’ ವಿಜ್ಞಾನ ವಸ್ತುಪ್ರದರ್ಶನಗಳ ಸಂಚಾರ ಬಸ್ ಸೇವೆಗೆ ಚಾಲನೆ ನೀಡಲಾಯಿತು. ಈ ಬಸ್ ಕಲಬುರಗಿ ಮಾತ್ರವಲ್ಲದೇ ಪಕ್ಕದ ಜಿಲ್ಲೆಗಳಾದ ಯಾದಗಿರಿ, ಬೀದರ್, ವಿಜಯಪುರ, ರಾಯಚೂರು, ಕೊಪ್ಪಳ ತನಕ ಓಡಾಡಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪರಿಚಯಿಸಿತು. 2018ರಲ್ಲಿ ಈ ಕೇಂದ್ರಕ್ಕೆ ಇನ್ನೆರಡು ಸಂಚಾರ ಬಸ್‌ಗಳು ದಕ್ಕಿದವು. ಸದ್ಯ ಯಾದಗಿರಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅವೆರಡೂ ಬಸ್‌ಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಅಲೆ ಸೃಷ್ಟಿಸುತ್ತಿವೆ.