ಬಾಗಲಕೋಟೆ: ‘ಬಿಳಿ ಬೋರ್ಡ್ನ ವಾಹನಗಳ ಹಾವಳಿ ಮಿತಿಮೀರಿದೆ. ನಮಗೆ ಬ್ಯಾಂಕ್ ಸಾಲ, ವಿಮಾ ಕಂತು ಕಟ್ಟಲು ಆಗುತ್ತಿಲ್ಲ. ಕೂಡಲೇ ಅವುಗಳಿಗೆ ನಿಯಂತ್ರಣ ಹೇರಿ ನಮ್ಮನ್ನು ರಕ್ಷಿಸಿ‘ ಎಂದು ಹಳದಿ (ಯೆಲ್ಲೊ) ಬೋರ್ಡ್ ಪ್ರವಾಸಿ ವಾಹನಗಳ ಚಾಲಕರು ಹಾಗೂ ಮಾಲೀಕರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಳದಿ ಬೋರ್ಡ್ ವಾಹನಗಳಿಗೆ ಮೂರು ತಿಂಗಳು ಇಲ್ಲವೇ ವರ್ಷಕ್ಕೊಮ್ಮೆ ತೆರಿಗೆ ಕಟ್ಟುತ್ತೇವೆ. ಆದರೆ ಜಿಲ್ಲೆಯಲ್ಲಿ ಸ್ವಂತ ಉಪಯೋಗಕ್ಕೆ ವಾಹನ ಖರೀದಿಸಿ (ವೈಟ್ ಬೋರ್ಡ್) ಬಾಡಿಗೆ ಓಡಿಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದರು.

ಹಳದಿ ಬೋರ್ಡ್ನ ವಾಹನಗಳ ಮಾಲೀಕರು ಹೊರ ರಾಜ್ಯಗಳಿಗೆ ಹೋಗಲು ತಾತ್ಕಾಲಿಕ ಅನುಮತಿ ಪಡೆಯಬೇಕಾಗುತ್ತದೆ. ಆದರೆ ವೈಟ್ ಬೋರ್ಡ್ನ ವಾಹನಗಳ ಮಾಲೀಕರಿಗೆ ದೇಶಾದ್ಯಂತ ಓಡಾಟ ನಡೆಸಲು ಅವಕಾಶವಿರುತ್ತದೆ. ಹೀಗಾಗಿ ನಮ್ಮ ವಾಹನಗಳನ್ನು ಹೊರ ರಾಜ್ಯಗಳಿಗೆ ಒಯ್ಯಲು ಆಗುತ್ತಿಲ್ಲ. ವೈಟ್ ಬೋರ್ಡ್ನ ವಾಹನಗಳು ಬಾಡಿಗೆ ಓಡಿಸಲು ಬಳಕೆಯಾಗುತ್ತಿದ್ದರೆ ಅವುಗಳನ್ನು ಹಿಡಿದು ಎಚ್ಚರಿಕೆ ಕೊಡಿ. ಭಾರೀ ಮೊತ್ತದ ದಂಡ ವಿಧಿಸಿ. ಇಲ್ಲವಾದರೆ ಯೆಲ್ಲೊ ಬೋರ್ಡ್ನ ಪ್ರವಾಸಿ ವಾಹನಗಳಿಗೂ ಹೊರ ರಾಜ್ಯಗಳಲ್ಲಿ ಓಡಾಟ ನಡೆಸಲು ಅನುಮತಿ ಕೊಡಿಸಿ ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ ಆರ್.ಎ.ಬಾಗೆವಾಡಿ, ಎಸ್.ಎಸ್.ಪಲ್ಲೇದ, ಎಂ.ಸಿ.ಘಂಟಿ, ವಿ.ಎನ್.ಧೂಪದ, ಮಂಜುನಾಥ ಮಡಿವಾಳರ, ವಿ.ಹುಲಗೂರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.