ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

119 ಬಸ್‌ಗಳಲ್ಲಿ ಬಂದ 4,165 ಕಾರ್ಮಿಕರು

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಜನರು
Last Updated 5 ಮೇ 2020, 17:33 IST
ಅಕ್ಷರ ಗಾತ್ರ

ಯಾದಗಿರಿ: ವಿವಿಧ ಕೆಲಸಗಳಿಗೆ ಜಿಲ್ಲೆಯಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗೆ ತೆರಳಿದ್ದ ಕಾರ್ಮಿಕರು ಮಂಗಳವಾರ 119 ಬಸ್‌ಗಳಲ್ಲಿ ಹಿಂತಿರುಗಿದ್ದಾರೆ. ಒಂದೊಂದು ಬಸ್‌ನಲ್ಲಿ 35ರಂತೆ 4,165 ಜನರು ಬಂದಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ತೆಗೆದಿರುವ ಜ್ವರ ತಪಾಸಣೆ ಕೇಂದ್ರದಲ್ಲಿ ಕಾರ್ಮಿರನ್ನು ತಪಾಸಣೆ ಮಾಡಲಾಯಿತು. ಯಾದಗಿರಿ ಸುತ್ತಮತ್ತಲಿನ ಗ್ರಾಮಗಳಿಗೆ ಕಾರ್ಮಿಕರನ್ನು ಕರೆದೊಯ್ಯಲು ವಾಹನ ಸೌಕರ್ಯವನ್ನು ಜಿಲ್ಲಾಡಳಿತದ ವತಿಯಿಂದ ಕಲ್ಪಿಸಲಾಗಿದೆ.

ಸೋಮವಾರ ರಾತ್ರಿ 11 ಗಂಟೆಯಿಂದ ಮಂಗಳವಾರ ಸಂಜೆ ವರೆಗೆ ಬಸ್‌ಗಳಲ್ಲಿ ಜನರು ಬಂದರು.ಬುಧವಾರವೂ ಸುಮಾರು 50ರಿಂದ60 ಬಸ್‌ಗಳಲ್ಲಿ ಕಾರ್ಮಿಕರು ಬರುವ ನಿರೀಕ್ಷೆ ಇದೆ.

ಗುಳೆ ಹೋದವರಲ್ಲಿ ಜಿಲ್ಲೆಯ ಜನ ಹೆಚ್ಚಾಗಿದ್ದಾರೆ. ಲಾಕ್‌ಡೌನ್‌ಕ್ಕಿಂತ ಮುಂಚೆ ಸಿಕ್ಕ ವಾಹನಗಳಲ್ಲಿ ಬಂದಿದ್ದರು. ಆನಂತರ ವಾಹನ ಸೌಕರ್ಯವಿಲ್ಲದ್ದರಿಂದ ಅನಿವಾರ್ಯವಾಗಿ ಅಲ್ಲೆ ಉಳಿದುಕೊಂಡಿದ್ದರು. ಈಗ ಸರ್ಕಾರದ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರು ಬರುತ್ತಿದ್ದಾರೆ.

ಕ್ರೀಡಾಂಗಣದಲ್ಲಿ ಬಂದು ಇಳಿಯುವವರಿಗೆ ಅಲ್ಲಲ್ಲಿ ನಳದ ವ್ಯವಸ್ಥೆ ಕಲ್ಪಿಸಲಾಗಿದ್ದು,ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.

ಮಾಸ್ಕ್‌ ವಿತರಣೆ: ಬಸ್‌ಗಳಲ್ಲಿ ಬರುವ ಕಾರ್ಮಿಕರಿಗೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾಸ್ಕ್‌ ವಿತರಿಸುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT