ಶನಿವಾರ, ಮೇ 15, 2021
25 °C

ಅಪಘಾತ: ಐವರು ಮಹಿಳೆಯರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಕೊಳ್ಳೂರು ಬಳಿ ಬುಧವಾರ ಬೆಳಿಗ್ಗೆ ಟಂಟಂ ವಾಹನ ಮತ್ತು ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿ, ಐವರು ಮಹಿಳಾ ಕೂಲಿಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಡಗೇರಾ ತಾಲ್ಲೂಕಿನ ಮುನಮುಟಗಿ ಗ್ರಾಮದ ದೇವೀಂದ್ರಮ್ಮ (57), ಅಯ್ಯಮ್ಮ (45), ಶರಣಮ್ಮ (35), ಉಮಾದೇವಿ (40) ಹಾಗೂ ಕಾಶೀಂಬಿ (55) ಮೃತರು. ಇವರು ಜಮೀನಿನ ಕೂಲಿಕೆಲಸಕ್ಕೆ ಟಂಟಂ ವಾಹನದಲ್ಲಿ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.