ಖಬರಸ್ತಾನ ಜಾಗ ಅತಿಕ್ರಮಣ: ಆರೋಪ

7

ಖಬರಸ್ತಾನ ಜಾಗ ಅತಿಕ್ರಮಣ: ಆರೋಪ

Published:
Updated:
Deccan Herald

ಶಹಾಪುರ: ‘ತಾಲ್ಲೂಕಿನ ರಸ್ತಾಪುರ ಗ್ರಾಮದ ಹೊರವಲಯದಲ್ಲಿ ಸಗರ ಮಾರ್ಗದ ಕೆರೆ ಸಮೀಪ ಇರುವ ಖಬರಸ್ತಾನ ಜಾಗವನ್ನು  ಪ್ರಭಾವಿ ವ್ಯಕ್ತಿಗಳು ಅತಿಕ್ರಮಣಕ್ಕೆ ಮುಂದಾಗಿದ್ದಾರೆ’ ಎಂದು  ಮುಸ್ಲಿಂ ಸಮುದಾಯದ ಮುಖಂಡ ಸಯ್ಯದ್ ಖಾದ್ರಿ ಆರೋಪಿಸಿದ್ದಾರೆ.

‘300 ವರ್ಷಗಳಷ್ಟು ಹಳೆಯ ಖಬರಸ್ತಾನ ಜಾಗದಲ್ಲಿ ಬೆಳೆದಿದ್ದ ಜಾಲಿಕಂಟಿ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದ್ದು, ಅಲ್ಲಿರುವ  ಹಳೆಯ ಗೋರಿಗಳನ್ನು ತೆರವುಗೊಳಿಸುವ ಮೂಲಕ ಸಂಪೂರ್ಣ ಖಬರಸ್ತಾನ ಜಾಗವನ್ನು ಕಬಳಿಸಲು  ಹುನ್ನಾರ ನಡೆಸುತ್ತಿದ್ದಾರೆ. ಇದನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದು,  ಸ್ಪಂದಿಸುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘30ಕ್ಕೂ ಹೆಚ್ಚು ಗೋರಿಗಳಿದ್ದು, ಅವೆಲ್ಲವನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಖಬರಸ್ತಾನ ಉಳಿಸಬೇಕು.  ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಳ್ಳದಿದ್ದರೆ ತಹಶೀಲ್ದಾರ್‌ ಕಚೇರಿ ಎದುರು   ಧರಣಿ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !