ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಳಿಂಬೆ ಬೆಳೆಯಲು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ’

ದಾಳಿಂಬೆ ಬೆಳೆ: ಒಂದು ದಿನದ ವಿಚಾರ ಸಂಕಿರಣ
Last Updated 28 ನವೆಂಬರ್ 2019, 15:23 IST
ಅಕ್ಷರ ಗಾತ್ರ

ಯಾದಗಿರಿ: ‘ದಾಳಿಂಬೆ ಬೆಳೆಯಲ್ಲಿ ಮಣ್ಣು ಮತ್ತು ನೀರಿನ ನಿರ್ವಹಣೆ ಬಹಳ ಮಹತ್ವ. ಅದರ ಸಮಗ್ರ ಬೇಸಾಯಕ್ಕೆ ಸೂಕ್ತ ವಾತಾವರಣ ಜಿಲ್ಲೆಯಲ್ಲಿದೆ. ರೈತರು ಉತ್ಕೃಷ್ಟವಾದ ದಾಳಿಂಬೆ ಉತ್ಪಾದನೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಜೋತ್ಸನಾ ಶರ್ಮಾ ಹೇಳಿದರು.

ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅದಾಮ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ದಾಳಿಂಬೆ ಬೆಳೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ದಾಳಿಂಬೆ ಬೆಳೆಯ ವಿವಿಧ ತಳಿಗಳ ಬಗ್ಗೆ ವಿವರಣೆ ನೀಡಿದ ಅವರು, ಹೊಸದಾಗಿ ಬಿಡುಗಡೆಗೊಳ್ಳುತ್ತಿರುವ ರೊಗ ನಿರೋಧಕ ತಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ.ಚಿತ್ತಾಪುರ ಮಾತನಾಡಿ, ‘ದಾಳಿಂಬೆ ಬೆಳೆಯಲ್ಲಿ ಸರಿಯಾದ ಸಮಯಕ್ಕೆ ಚಾಟನಿ ಮಾಡುತ್ತಾ ಸರಿಯಾಗಿ ನಿರ್ವಹಣೆ ಮಾಡಬೇಕು. ತೋಟದ ಸುತ್ತಮುತ್ತ ಜೈವಿಕ ತಡೆಗಳನ್ನು ನಿರ್ಮಾಣ ಮಾಡಿ ಬೆಳೆಯನ್ನು ಸಂರಕ್ಷಣೆ ಮಾಡಬೇಕು’ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ದಾಳಿಂಬೆ ತಜ್ಞ ಡಾ.ವಿ.ಐ.ಬೆಣಗಿ ಮಾತನಾಡಿ, ‘ದಾಳಿಂಬೆ ಬೆಳೆಯಲ್ಲಿ ಮೊದಲ ಎರಡು ವರ್ಷಗಳವರೆಗೆ ಯಾವುದೇ ತರಹದ ಹಣ್ಣುಗಳನ್ನು ಪಡೆಯಬಾರದು. ರೋಗ ಮತ್ತು ಕೀಟಗಳ ಹಾವಳಿ ತಡೆಯಲು ಸಕಾಲಕ್ಕೆ ಜೈವಿಕ ಮತ್ತು ರಸಾಯನಿಕ ಕ್ರಮ ಹಾಗೂ ಖರ್ಚು ಕಡಿಮೆ ಮಾಡುವಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೀಟ ಶಾಸ್ತ್ರಜ್ಞ ಡಾ.ಅರುಣಕುಮಾರ ಹೊಸಮನಿ, ರಾಯಚೂರು ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ.ಜೆ.ಆರ್.ಪಾಟೀಲ, ಕಾಡಾ ಭೀಮರಾಯನಗುಡಿ ಜಂಟಿ ನಿರ್ದೇಶಕ ಡಾ.ಜಿಯಾವುಲ್ಲಾ ಅವರು ರೈತರಿಗೆ ಅಚ್ಚುಕಟ್ಟು ಪ್ರದೇಶದಲ್ಲಿ ಪರ್ಯಾಯ ಹಣ್ಣು ಬೆಳೆಗಳ ಬೇಸಾಯ ಮಾಡುವಂತೆ ಸಲಹೆ ನೀಡಿದರು.

ಅದಮಾ ಇಂಡಿಯಾ ಸಂಸ್ಥೆಯ ಅಧಿಕಾರಿಗಳಾದ ಡಾ.ಮಂಜುನಾಥ, ಡಾ.ಅನೀಲ ಭಂಡಾರೆ, ಮಣ್ಣು ಮತ್ತು ಜಲತಜ್ಞ ಡಾ.ರಾಜಕುಮಾರ ಹಳ್ಳಿದೊಡ್ಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮೋಹನ ಚವಾಣ, ಜೈವಿಕ ತಂತ್ರಜ್ಞಾನ ವಿಜ್ಞಾನಿ ಡಾ.ಪ್ರಕಾಶ ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಸತೀಶ ಕಾಳೆ, ಡಾ.ಉಮೇಶ ಬಾರಿಕರ, ಡಾ.ಮಹೇಶ, ಅದಮಾ ಸಂಸ್ಥೆಯ ಆನಂದ ಅದ್ದೇಮಲ, ಪ್ರಭಾಕರ ರೆಡ್ಡಿ ಇದ್ದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು. ಯಾದಗಿರಿ, ರಾಯಚೂರು ಹಾಗೂ ಕಲಬುರ್ಗಿ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT