ಶಹಾಪುರ: ಶಿಕ್ಷಣವೇ ಶಕ್ತಿ ಎನ್ನುವಂತೆ ಸಂತ ಸೇವಾಲಾಲರು ಶಿಕ್ಷಣದ ಮೂಲಕ ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಬಂಜಾರ ಸಮುದಾಯ ಸ್ವಾಭಿಮಾನದ ಪ್ರತೀಕವಾಗಿದೆ. ನಮ್ಮ ಸಮಾಜದ ಜನತೆ ಅನ್ಯ ಸಮುದಾಯದ ಜತೆ ಸಾಮರಸ್ಯದಿಂದ ಬಾಳುತ್ತಿದ್ದಾರೆ ಎಂದು ಬಂಜಾರ ಸಮಾಜದ ಮುಖಂಡ ರೇಖು ಚವ್ಹಾಣ ತಿಳಿಸಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಪುರುಷರು ಸ್ವಾರ್ಥವನ್ನು ಬದಿಗೊತ್ತಿ ಸಮಾಜದ ಒಳಿತಾಗಿ ಆದರ್ಶ ಜೀವನ ಸಾಗಿಸಿದ್ದಾರೆ. ಸೇವಾಲಾಲರು ತೋರಿದ ಮಾರ್ಗದಲ್ಲಿ ಜನ ಸಾಗಬೇಕು. ಶೈಕ್ಷಣಿಕ ಮತ್ತು ರಾಜಕೀಯವಾಗಿ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಿಕೊಳ್ಳಬೇಕು. ಯುವಕರು ದುಶ್ವಟದಿಂದ ದೂರ ಉಳಿದುಕೊಳ್ಳಬೇಕು. ನಮ್ಮ ಗುರಿ ಸದಾ ಯಶಸ್ಸಿನ ಕಡೆ ಇರಲಿ ಎಂದರು.

ನಗರದಲ್ಲಿ ಜಯಂತ್ಯುತ್ಸವ ಮೆರವಣಿಗೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು.

ತೇಜು ಮಹಾರಾಜ, ನೇರು ಪೂಜಾರಿ, ಗ್ರೇಡ್-2 ತಹಶೀಲ್ದಾರ್ ಸೋಮನಾಥ ಅಂಗಡಿ, ವಿವಿಧ ಸಮುದಾಯದ ಮುಖಂಡರಾದ ಮಾನಸಿಂಗ್ ಚವ್ಹಾಣ, ಶಿವಮಹಾಂತ ಚಂದಾಪುರ ಗಿರೆಪ್ಪಗೌಡ ಬಾಣತಿಹಾಳ, ಆರ್.ಚೆನ್ನಬಸ್ಸು ವನದುರ್ಗ, ಸಣ್ಣ ನಿಂಗಣ್ಣ ನಾಯ್ಕೋಡಿ, ಚಂದ್ರಕಾಂತ ರಾಠೋಡ, ಸಂತೋಷ ರಾಠೋಡ, ವೆಂಕಟೇಶ ಚಾಧವ್, ಚಂದ್ರಶೇಖರ ಜಾದವ, ಶಿವರಾಮ್, ಅಲ್ಲಾ ಪಟೇಲ್ ಮಕ್ತಾಪುರ, ಮಲ್ಲಣಗೌಡ ತಿಪ್ಪನಹಳ್ಳಿ, ವಾಲು ರಾಠೋಡ, ಸುನೀಲ್ ರಾಠೋಡ, ಬಸವರಾಜ ಕನ್ಯಾಕೊಳ್ಳುರ, ಗೇನು ಕನ್ಯಾಕೊಳ್ಳೂರ, ವಿಕ್ರಮ್ ರಾಠೋಡ, ಅಜಯ್, ವಿಜಯ ರಾಠೋಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.