ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬೇಡಿಕೆ ಈಡೇರಿಕೆಗೆ ಸಿಎಚ್ಒಗಳ ಪ್ರತಿಭಟನೆ

ಪ್ರೋತ್ಸಾಹಧನ ಹೆಚ್ಚಿಸಲು, ಹುದ್ದೆ ಕಾಯಂಗೊಳಿಸಲು ಆಗ್ರಹ
Last Updated 18 ನವೆಂಬರ್ 2022, 16:15 IST
ಅಕ್ಷರ ಗಾತ್ರ

ಯಾದಗಿರಿ: ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಧೋರಣೆ ವಿರೋಧಿಸಿ ಹಾಗೂ ಶಾಸನಬದ್ಧ ಹಕ್ಕುಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘ ವತಿಯಿಂದ ಡಿಎಚ್‌ಒ ಕಚೇರಿ ಮುಂಭಾಗ ಶುಕ್ರವಾರ ರಾಜ್ಯಮಟ್ಟದಪ್ರತಿಭಟನೆನಡೆಸಲಾಯಿತು.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2017-17ನೇ ಸಾಲಿನಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸುವುದು, ಜನ್‌ ಆರೋಗ್ಯ ಸಮಿತಿ ರಚನೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ವಹಣೆಗೆ ಅಗತ್ಯ ಹಣಕಾಸು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯಚಟುವಟಿಕೆಗೆ ಕೇಂದ್ರ ಸರ್ಕಾರವು ಪ್ರತ್ಯೇಕ ನಿಯಮಗಳನ್ನು ರಚಿಸಿ, ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ರಾಜ್ಯದ ಆರೋಗ್ಯ ಅಭಿಯಾನ ಅಧಿಕಾರಿಗಳು ಉದ್ದೇಶಿತ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ದೂರಿದರು.

ಪ್ರೋತ್ಸಾಹಧನ ಮಾಸಿಕ ₹15,000 ಬೇರೆ ರಾಜ್ಯಗಳಲ್ಲಿ ಪಾವತಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ₹8 ಸಾವಿರ ಪಾವತಿಸಲಾಗುತ್ತದೆ. ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ₹15 ಸಾವಿರ ನೀಡಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಅಭಿಯಾನದ ಉನ್ನತ ಮಟ್ಟದ ಅಧಿಕಾರಿಗಳಿಗೆ ಹಲವಾರು ಸುತ್ತಿನ ಮನವಿ ಸಲ್ಲಿಸಲಾಗಿದೆ. ಹಾಗೆಯೇ, ಕಾಯಂ ಎಂಬಿಬಿಎಸ್ ಕೆಲಸದ ದರ್ಜೆಯಲ್ಲಿ ದುಡಿಯುತ್ತಿರುವ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೇಂದ್ರ ಸರ್ಕಾರದ ಸಲಹೆಯಂತೆ ಹಾಗೂ ನಿಯಮಾವಳಿಗಳ ಪ್ರಕಾರ ಕಾಯಂಗೊಳಿಸಬೇಕು. ಸಮಾನ ದುಡಿಮೆಗೆ ಸಮಾನ ವೇತನ ನೀಡಬೇಕೆಂದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಸಂಬಂಧಪಟ್ಟ ಅಭಿಯಾನದ ಉನ್ನತಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಸ್ಪಂದಿಸಿಲ್ಲ. ಹೀಗಾಗಿಯೇಪ್ರತಿಭಟನೆನಡೆಸಲಾಗುತ್ತದೆ ಎಂದು ಹೇಳಿದರು.

ನಂತರ ಡಿಎಚ್‌ಒ ಮೂಲಕ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಕ್ರಿಸ್ಟೋಫರ್, ಸಂಘದ ಮಾಜಿ ಅಧ್ಯಕ್ಷ ಗೋವಿಂದ ರಾಥೋಡ್‌, ಉಪಾಧ್ಯಕ್ಷ ರಿಜ್ವಾನ್ ಖಾನ್, ಖಜಾಂಚಿ ದುಂಡಪ್ಪ ಚವಾಣ್, ಯಾದಗಿರಿ ಅಧ್ಯಕ್ಷ ಕುನಾಲ್ ಕುಮಾರ್,ಶಹಾಪುರ ಅಧ್ಯಕ್ಷ ಮಹಾದೇವ್ ಹುಬ್ಬಳ್ಳಿ, ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT