ಶನಿವಾರ, ಜನವರಿ 28, 2023
18 °C

ಪಾದಯಾತ್ರೆಯಲ್ಲಿ ಹೆಚ್ಚು ಜನ ಹೆಜ್ಜೆ ಹಾಕೋಣ: ಶಾಸಕ ಶರಣಬಸಪ್ಪ ದರ್ಶನಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆ ಅ.21ರಂದು ರಾಯಚೂರು ಜಿಲ್ಲೆಗೆ ಆಗಮಿಸಲಿದೆ. ಶಹಾಪುರ ಮತಕ್ಷೇತ್ರದ ಹೆಚ್ಚಿನ ಜನತೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕೋಣ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ತಾಲ್ಲೂಕಿನ ಭೀಮರಾಯನಗುಡಿ ಬಲಭೀಮೇಶ್ವರ ಕಲ್ಯಾಣ ಮಂಟದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕನಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ ತೃಪ್ತಿ ನನಗಿದೆ. ಮುಂದೆ ಕ್ರೀಯಾಶೀಲರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವದರೊಂದಿಗೆ ಕಾರ್ಯಕರ್ತರ ಅರ್ಪಣಾ ಮನೋಭಾವ ಹೆಚ್ಚಿದೆ ಎಂದರು.

ಮರಿಗೌಡ ಹುಲಕಲ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಸಿದ್ದನಗೌಡ ಕೆಂಭಾವಿ, ಹಣಮಂತ್ರಾಯ ದಳಪತಿ,ಬಸನಗೌಡ ಹೊಸಮನಿ, ಸಿದ್ದಲಿಂಗಣ್ಣ ಆನೆಗುಂದಿ, ಶರಣಪ್ಪ ಸಲಾದಪುರ, ಯಲ್ಲಪ್ಪ ಚಿಪ್ಪಾರ, ಶಿವಮಾಂತ ಚಂದಾಪುರ, ಸಣ್ಣ ನಿಂಗಣ್ಣ ನಾಯ್ಕೊಡಿ, ನೀಲಕಂಠ ಬಡಿಗೇರ, ಮಹಾದೇವಪ್ಪ ಸಾಲಿಮನಿ, ಇಬ್ರಾಹಿಂ ಶಿರವಾಳ, ಡಾ, ಭೀಮಣ್ಣ ಮೇಟಿ, ಚಂದಪ್ಪ ಸೀರಿ, ಮಾನಸಿಂಗ ಚೌವಾಣ್,ವಸಂತ ಸುರುಪುರಕರ್, ಮಲ್ಲಿಕಾರ್ಜುನ ಪೂಜಾರಿ,ಹಣಮಂತ್ರಾಯಗೌಡ ರಾಕಂಗೇರಾ. ಚಂದಪ್ಪ ಸಿತ್ನಿ, ಶಾಂತಪ್ಪ ಕಟ್ಟಿಮನಿ. ಮಲ್ಲಪ್ಪ ಗೋಗಿ, ರುದ್ರಣ್ಣ ಚಟ್ರಕಿ, ಬಸವರಾಜ ನಾಯಕಲ್, ಸೋಪಣ್ಣ ದರಿಯಾಪುರ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು