ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಯಿಂದ ಅನೇಕ ಜನಪರ ಯೋಜನೆ ಜಾರಿ’

Published 27 ಏಪ್ರಿಲ್ 2024, 15:34 IST
Last Updated 27 ಏಪ್ರಿಲ್ 2024, 15:34 IST
ಅಕ್ಷರ ಗಾತ್ರ

ವಡಗೇರಾ: ‘ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ದಲಿತರು ಹಾಗೂ ಹಿಂದುಳಿದವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿಗೌಡ ಮುದ್ನಾಳ ಹೇಳಿದರು.

ಯಾದಗಿರಿ ಮತಕ್ಷೇತ್ರದ ಹಾಗೂ ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಬೀರನಾಳ, ಬಬಲಾದ, ಗಡ್ಡೆಸೂಗೂರ, ಹಾಲಗೇರಾ, ಗೋಡಿಹಾಳ, ಕುಮನೂರ, ಅರ್ಜುಣಗಿ, ಹೊರಟೂರ, ತೇಕರಾಳ, ಉಳ್ಳೆಸೂಗೂರ, ಮಾಲಹಳ್ಳಿ ಗ್ರಾಮಗಳಲ್ಲಿ ರಾಯಚೂರ-ಯಾದಗಿರಿ ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಶನಿವಾರ ಬಿಜೆಪಿ ವತಿಯಿಂದ ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.

‘ಇಂದು ಭಾರತದ ಕಡೆಗೆ ವಿಶ್ವವೇ ಗೌರವ ಭಾವನೆಯಿಂದ ನೋಡುವಂತಾಗಲು ಮೋದಿ ಅವರ ಜನಪರ ಯೋಜನೆಗಳು ಹಾಗೂ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಕಾರಣ’ ಎಂದು ಅವರು ತಿಳಿಸಿದರು.

ಜಿಪಂ ಮಾಜಿ ಸದಸ್ಯ ದೇವರಾಜ ನಾಯಕ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಕಳೆದ ಐದು ವರ್ಷಗಳಲ್ಲಿ ವಡಗೇರಾ ತಾಲ್ಲೂಕಿನಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ ಜಲ ಜೀವನ್ ಮಿಷನ್, ಚತುಷ್ಟಥ ರಸ್ತೆ ಹಾಗೂ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಸೇರಿವೆ’ ಎಂದು ತಿಳಿಸಿದರು.

ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮಾರೆಡ್ಡಿಗೌಡ ನಾಯ್ಕಲ್, ಸದಾಶಿವರೆಡ್ಡಿಗೌಡ ರೊಟ್ನಡಗಿ, ಶರಣಭೂಪಾಲರೆಡ್ಡಿ ಗುಲಸರಂ, ಬಸವರಾಜ ಸಾಹು ಸೊನ್ನದ, ಬಸವರಾಜಪ್ಪಗೌಡ ಬೀರನಾಳ, ಈರಣ್ಣಗೌಡ ಬಬಲಾದ, ಚನ್ನರಡ್ಡಿಗೌಡ ಗಡ್ಡೆಸುಗೂರ, ಶರಣಗೌಡ ದಳಪತಿ, ಜಗದೀಶ ಹಾಲಗೇರಾ,ಶರಣಗೌಡ ಹಾಲಗೇರಾ, ಸಂಗಾರೆಡ್ಡಿಗೊಡಿಹಾಳ, ಮರೆಪ್ಪನಾಟೇಕಾರ, ವಿಜಯಕುಮಾರ ಕುಮನೂರ, ಬಲದೇವ ನಾಯಕ ಉಳ್ಳೆಸೂಗುರ, ಕುಮಲಪ್ಪ, ಮೋಹನರೆಡ್ಡಿ ಅರ್ಜುಣಗಿ, ಮಾಳಪ್ಪ ಹೊರಟೂರ, ಶೇಖರಗೌಡ ಬಿರದಾರ ಮಾಲಹಳ್ಳಿ, ಬಸಣಗೌಡ ತೇಕರಾಳ, ದೇವಪ್ಪ ಶರಣಗೌಡ, ಹಬ್ಬಣ್ಣ ಉಳ್ಳೆಸುಗೂರ,ಶಿವಲಿಂಗಪ್ಪ, ದೇವರಾಜಗೌಡ  ಉಪಸ್ಥಿತರಿದ್ದರು.

ವಡಗೇರಾ ತಾಲ್ಲೂಕಿನ ಮಾಲಹಳ್ಳಿಯಲ್ಲಿ ಶನಿವಾರ ಕೇಂದ್ರದ ಬಿಜೆಪಿ ಸರ್ಕಾರ ಯೋಜನೆಗಳ ಮಾಹಿತಿ ಒಳಗೊಂಡ ಭಿತ್ತಿಪತ್ರಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು
ವಡಗೇರಾ ತಾಲ್ಲೂಕಿನ ಮಾಲಹಳ್ಳಿಯಲ್ಲಿ ಶನಿವಾರ ಕೇಂದ್ರದ ಬಿಜೆಪಿ ಸರ್ಕಾರ ಯೋಜನೆಗಳ ಮಾಹಿತಿ ಒಳಗೊಂಡ ಭಿತ್ತಿಪತ್ರಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT