ಬಜೆಟ್‌ ಬಗ್ಗೆ ಜನಾಭಿಪ್ರಾಯಗಳು

7

ಬಜೆಟ್‌ ಬಗ್ಗೆ ಜನಾಭಿಪ್ರಾಯಗಳು

Published:
Updated:
Prajavani

ಬರೀ ಓಲೈಕೆ..

ರಾಜ್ಯ ಬಜೆಟ್ ಜನರನ್ನು ಓಲೈಕೆ ಮಾಡಿದೆ. ಬಜೆಟ್‌ನಲ್ಲಿ ಘೋಷಣೆ ಆಗಿರುವ ಹೊಸ ಯೋಜನೆಗಳು ಪ್ರಮಾಣಿಕವಾಗಿ ಅನುಷ್ಠಾನಗೊಳ್ಳಬೇಕು. ಈ ಬಜೆಟ್‌ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಿದೆ.
ಕಲ್ಪನಾ ಗುರಸಣಗಿ 
ಮಹಿಳಾ ಹೋರಾಟಗಾತಿ, ಯಾದಗಿರಿ

ಯಾದಗಿರಿ ಗಡೆಗಣನೆ

ಆಳುವ ಸರ್ಕಾರಗಳು ಏಕೆ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸುತ್ತವೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಇನ್ನೆಷ್ಟು ದಿನ ಉತ್ತಮ ಯೋಜನೆಗಳಿಗಾಗಿ ಕಾಯಬೇಕು. ಸಮ್ಮಿಶ್ರ ಸರ್ಕಾರ ಇನ್ನಷ್ಟು ಉತ್ತಮ ಅಂಶಗಳನ್ನು ಹೊಂದಬೇಕಿತ್ತು.
ಚಂದ್ರಕಾಂತ ಕರದಳ್ಳಿ  
ಸಾಹಿತಿ, ಶಹಾಪುರ

ಪರವಾಗಿಲ್ಲ..

ಬಜೆಟ್‌ ಪರವಾಗಿಲ್ಲ. ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂದುವರಿದ ಜಿಲ್ಲೆಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದುಳಿದ ಜಿಲ್ಲೆಗಳನ್ನು ಪಟ್ಟಿ ಮಾಡಿ ವಿಶೇಷ ಯೋಜನೆ ನೀಡುವ ಕೆಲಸ ಮಾಡಬೇಕಿತ್ತು.
ಹಣಮೇಗೌಡ ಬೀರನಕಲ್ 
ಮುಖಂಡ, ಯಾದಗಿರಿ

ಇದು ಸಾಹುಕಾರರ ಬಜೆಟ್

ಪಡಿತರ ಚೀಟಿಯಲ್ಲಿ ವಿತರಣೆ ಆಗುತ್ತಿದ್ದ ಸೀಮೆಣ್ಣೆ, ರಾಗಿ ವಿತರಣೆ ಸ್ಥಗಿತಗೊಂಡಿದೆ. ಅಡುಗೆ ಅನಿಲಕೊಂಡು ಅಕ್ಕಿ ಬೇಯಿಸುವಷ್ಟು ಆರ್ಥಿಕ ಶಕ್ತಿ ನಮಗಿಲ್ಲ. ಬಡವರ ಹಸಿವಿನ ಬಗ್ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಇದು ಸಾಹುಕಾರರ ಬಜೆಟ್.
ಸಾಬಮ್ಮ ಅಲಿಪುರ 
ಕೂಲಿ ಕಾರ್ಮಿಕ ಮಹಿಳೆ

ಗುಳೆ ನಿಯಂತ್ರಣ ವಿಶೇಷ ಯೋಜನೆ ಇಲ್ಲ

ಹುಟ್ಟಿನಿಂದಲೂ ಗುಳೆಯಲ್ಲೇ ಬದುಕು ಸವೆಸಿದ್ದೇವೆ. ಮೂರು ವರ್ಷಗಳಿಂದ ಮಳೆ ಇಲ್ಲ. ಊರಲ್ಲಿ ಕುಡಿಯಲು ನೀರಿಲ್ಲ. ಜನರ ಸ್ಥಿತಿಗತಿ ಸುಧಾರಿಸುವ ವಿಶೇಷ ಯೋಜನೆ ಪ್ರಕಟಿಸಬೇಕಿತ್ತು. ಮುಖ್ಯಮಂತ್ರಿ ಬಡವರ ಮಗನಲ್ಲ. ಹಾಗಾಗಿ, ಬಡವರ ಬವಣೆ ನೀಗಿಸುವ ಯೋಜನೆ ಬಜೆಟ್‌ನಲ್ಲಿ ಇಲ್ಲ.
ತಾಯಮ್ಮ  
ಲಾಡಸ್‌ಗಲ್ಲಿ, ಯಾದಗಿರಿ

ಖುಷಿತಂದ ಕ್ರೀಡಾ ವಸತಿ ಶಾಲೆ..

ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ಇಲ್ಲದ ಕಾರಣ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಕಮರಿ ಹೋಗುತ್ತಿದ್ದಾರೆ. ಅಂತವರಿಗೆ ಸರ್ಕಾರ ಬಜೆಟ್‌ನಲ್ಲಿ ಕ್ರೀಡಾ ವಸತಿ ಶಾಲೆ ಘೋಷಿಸಿರುವುದು ಖುಷಿ ನೀಡಿದೆ.
ನಿರ್ಮಲಾ ಮಾರಿ  
ಬ.ಎ. ಪದವಿ ತರಗತಿ ವಿದ್ಯಾರ್ಥಿನಿ
ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !