ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ವಾರಾಂತ್ಯ ಕರ್ಫ್ಯೂ ಮಧ್ಯೆ ನಿಲ್ಲದ ತೆರವು ಕಾರ್ಯಾಚರಣೆ

Last Updated 9 ಜನವರಿ 2022, 6:39 IST
ಅಕ್ಷರ ಗಾತ್ರ

ಶಹಾಪುರ: ವಾರಾಂತ್ಯದ ಕರ್ಫ್ಯೂ ಜಾರಿಯ ನಡುವೆಯೂ ಶನಿವಾರ ನಗರದ ರಸ್ತೆಯ ಬದಿಯ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆಯಿತು.

ಪೌರಾಯುಕ್ತ ಓಂಕಾರ ಪೂಜಾರಿ ಅವರ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಿಂದ ಮೋಚಿಗಡ್ಡೆ, ಹಳೆ ತರಕಾರಿ ಮಾರುಕಟ್ಟೆಯ ವರೆಗೆ ಚರಂಡಿ ಮೇಲೆ ನಿರ್ಮಿಸಿಕೊಂಡಿದ್ದ ಶೆಡ್‌, ಕಟ್ಟೆ, ಮೆಟ್ಟಿಲುಗಳನ್ನು ಕೆಡವಲಾಯಿತು. ಕೆಲವು ಅಂಗಡಿಗಳ ಮಾಲೀಕರು ತಾವೇ ಮುಂದೆ ನಿಂತು ತೆರವುಗೊಳಿಸಿಕೊಂಡರು.

ಮುಖ್ಯರಸ್ತೆಯಲ್ಲಿ ವಾಹನ ಹಾಗೂ ಜನರು ಸಂಚಾರ ಹೆಚ್ಚಳವಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ, ಅನಿವಾರ್ಯವಾಗಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ರಸ್ತೆ ಬದಿಯ ಚರಂಡಿ ಮೇಲೆ ಅಂಗಡಿ ವಿಸ್ತರಿಸಿರುವುದು ಸರಿಯಲ್ಲ. ವರ್ತಕರು ಅರ್ಥೈಸಿಕೊಂಡು ಸಹಕರಿಸ ಬೇಕು ಎಂದು ನಗರಸಭೆಯ ಅಧಿಕಾರಿ ಯೊಬ್ಬರು ಮನವಿ ಮಾಡಿದರು.

ವಾರದಲ್ಲಿ ಮಕರ ಸಂಕ್ರಮಣ ಹಬ್ಬ ಬರಲಿದೆ. ಆಗ ಸ್ವಲ್ಪಮಟ್ಟಿನ ವ್ಯಾಪಾರ ನಡೆದು ಒಂದಿಷ್ಟು ಆದಾಯ ಬರುತ್ತಿತ್ತು. ನಗರಸಭೆ ಏಕಾಏಕಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು ಸರಿಯಲ್ಲ. ಕೋವಿಡ್‌ನಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ತೆರವು ಕಾರ್ಯಾಚರಣೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೀದಿಬದಿ ವ್ಯಾಪಾರಸ್ಥರು ಮತ್ತೆ ತೊಂದರೆಗೆ ಸಿಲುಕಿದ್ದಾರೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಸವರಾಜ ಅರುಣಿ ಆರೋಪಿಸಿದರು.

ಹಲವು ಕುಟುಂಬಗಳು ಬೀದಿ ಬದಿಯ ವ್ಯಾಪಾರ ನಂಬಿ ಬದುಕು ಸಾಗಿಸುತ್ತಿವೆ. ನಗರಸಭೆ ಇದುವರೆಗೂ ಅವರಿಗೆ ಯಾವುದೇ ಅನುಕೂಲತೆ ಕಲ್ಪಿಸಿಲ್ಲ. ಪ್ರತ್ಯೇಕ ಸ್ಥಳಾವಕಾಶ ಸಹ ನೀಡಿಲ್ಲ. ತನ್ನ ಭರವಸೆಗಳನ್ನು ಈಡೇರಿಸಿಲ್ಲ. ತೆರವು ಕಾರ್ಯಾಚರಣೆಯಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇಶಾಸಕರು ಈ ಬಗ್ಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದು ಬೀದಿ ಬದಿಯ ವ್ಯಾಪಾರಸ್ಥರು ಮನವಿ ಮಾಡಿದರು.

ಹೆದ್ದಾರಿ ಬಳಿ ಅನಧಿಕೃತವಾಗಿ ಶೆಡ್‌ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತಿತ್ತು. ಜನರ ಹಿತದೃಷ್ಟಿ, ಮೇಲಾಧಿಕಾರಿಗಳ ಸೂಚನೆಯಂತೆ ತೆರವು ಕಾರ್ಯ ನಡೆಯುತ್ತಿದೆ ಎಂದು ಪೌರಾಯುಕ್ತ ಓಂಕಾರ ಪೂಜಾರಿ ಕೋರಿದರು.

*

ಹೆದ್ದಾರಿ ಬಳಿ ಅನಧಿಕೃತವಾಗಿ ಶೆಡ್‌ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತಿತ್ತು. ಜನರ ಹಿತದೃಷ್ಟಿ, ಮೇಲಾಧಿಕಾರಿಗಳ ಸೂಚನೆಯಂತೆ ತೆರವು ಕಾರ್ಯ ನಡೆಯುತ್ತಿದೆ.
-ಓಂಕಾರ ಪೂಜಾರಿ, ಪೌರಾಯುಕ್ತ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT