ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎ: ಪ್ರಥಮ ಪ್ರಯತ್ನದಲ್ಲೇ ವಿಶ್ವಾಸ್‌ ಉತ್ತೀರ್ಣ

Last Updated 16 ಸೆಪ್ಟೆಂಬರ್ 2021, 6:01 IST
ಅಕ್ಷರ ಗಾತ್ರ

ಮೈಸೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ನಗರದ ವಿಶ್ವಾಸ್‌ ಕುಮಾರ್‌ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.

20 ವರ್ಷದ ಅವರು ಕಿರಿಯ ವಯಸ್ಸಿನಲ್ಲೇ ಸಿ.ಎ ತೇರ್ಗಡೆಯಾದ ಸಾಧನೆ ಮಾಡಿದ್ದಾರೆ. ಇವರು ವಿದ್ಯಾರಣ್ಯಪುರಂನ ನಿವಾಸಿ ಕೀರ್ತಿಕುಮಾರ್– ನಾಗರತ್ನ ದಂಪತಿಯ ಪುತ್ರ.

ಸಿ.ಎ ಫೌಂಡೇಷನ್‌ ಮತ್ತು ಇಂಟರ್‌ಮೀಡಿಯೇಟ್‌ ಪರೀಕ್ಷೆಗಳನ್ನೂ ಅವರು ಕ್ರಮವಾಗಿ 2017, 2018 ರಲ್ಲಿ ಮೊದಲ ಪ್ರಯತ್ನದಲ್ಲೇ ಪಾಸ್‌ ಮಾಡಿಕೊಂಡಿದ್ದರು. ಸದ್ವಿದ್ಯಾ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊ ಳಿಸಿದ ಬಳಿಕ ಸಿ.ಎಗೆ ಸಿದ್ಧತೆ ನಡೆಸಿದ್ದಾರೆ.

‘ವಿಜ್ಞಾನ ವಿಷಯದಲ್ಲಿ ಆಸಕ್ತಿ ಇಲ್ಲದ್ದರಿಂದ ಪಿಯುಸಿನಲ್ಲಿ ಕಾಮರ್ಸ್‌ ತೆಗೆದುಕೊಂಡು ಓದಿದೆ. ವಾಣಿಜ್ಯ ವಿಷಯದಲ್ಲಿ ಆಸಕ್ತಿ ಮೂಡಿ, ಸಿ.ಎ ಮಾಡಬೇಕೆಂಬ ಛಲ ಮೂಡಿತು. ಉಪನ್ಯಾಸಕರು ಮತ್ತು ತಂದೆಯ ಪ್ರೋತ್ಸಾಹದಿಂದ ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಉತ್ತೀರ್ಣನಾದೆ’ ಎಂದು ವಿಶ್ವಾಸ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸನ್ಮಾನ: ಸಿ.ಎ ಉತ್ತೀರ್ಣರಾದ ವಿಶ್ವಾಸ್ ಅವರನ್ನು ಮಹಾಲಕ್ಷ್ಮಿ ಸ್ವೀಟ್ಸ್‌ ಮಾಲೀಕ ಶಿವಕುಮಾರ್ ಬುಧವಾರ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT