ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡೂರ ಗ್ರಾಮದ ಕೃಷ್ಣಾ ನದಿ ಬಳಿ ಮೊಸಳೆ ಪ್ರತ್ಯಕ್ಷ

Last Updated 3 ನವೆಂಬರ್ 2020, 16:19 IST
ಅಕ್ಷರ ಗಾತ್ರ

ಶಹಾಪುರ: ಗೌಡೂರ ಗ್ರಾಮದ ಬಳಿ ಕೃಷ್ಣಾ ನದಿಯ ದಂಡೆಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಪ್ರವಾಹದಿಂದಾಗಿ ಮೊಸಳೆ ಬೇರೆ ಸ್ಥಳದಿಂದ ಬಂದಿವೆ. 15 ದಿನದ ಹಿಂದೆಯೂ ಮೊಸಳೆ ಕಾಣಿಸಿಕೊಂಡಿತ್ತು. ಎರಡು ಕುರಿ ಮರಿ ಹಾಗೂ ಎರಡು ಮೇಕೆ ಮರಿಯನ್ನು ತಿಂದು ಹಾಕಿದೆ. ಯಾರು ಇಲ್ಲದ ಸಮಯದಲ್ಲಿ ನದಿ ದಂಡೆಯ ಮೇಲೆ ಬಂದು ಮಲಗುತ್ತಿದೆ. ಇದರಿಂದ ನದಿಯಲ್ಲಿ ಇಳಿಯಲು ಭೀತಿ ಉಂಟಾಗಿದೆ ಎಂದು ಗ್ರಾಮದ ಮುಖಂಡ ದೇವಿಂದ್ರ ಛಲವಾದಿ ತಿಳಿಸಿದರು.

ಗ್ರಾಮದಲ್ಲಿ 20 ದಿನದ ಹಿಂದೆ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದರಿಂದ ಗ್ರಾಮದ ಜನತೆಯು ಕುಡಿಯುವ ನೀರಿಗೆ ನದಿಗೆ ತೆರಳುತ್ತಿದ್ದಾರೆ. ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಹೆಚ್ಚಾಗಿ ನೀರು ತರಲು ಹೋದಾಗ ದಾಳಿ ಮಾಡಿ ಹಿಡಿಯುವ ಭೀತಿ ಉಂಟಾಗಿದೆ. ಅಲ್ಲದೆ ನದಿ ದಂಡೆಯ ಗದ್ದೆಯಲ್ಲಿಯೂ ಆಹಾರಕ್ಕಾಗಿ ಮೊಸಳೆ ಆಗಮಿಸುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT