ಶನಿವಾರ, ಜೂನ್ 19, 2021
26 °C

ಸೈದಾಪುರ: ನೀರಿನ ರಭಸಕ್ಕೆ ಕ್ರೂಸರ್ ಪಲ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಸೈದಾಪುರ ಸಮೀಪದ ಕೊಂಡಾಪುರ ಬಳಿಯಿರುವ ಹಳ್ಳದ ಸೇತುವೆಯಲ್ಲಿ ಕ್ರೂಸರ್ ಮಗುಚಿ ಬಿದ್ದ ದುರ್ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ವಡಗೇರಾ ತಾಲ್ಲೂಕಿನ ತುಮಕೂರಿನಿಂದ ಗುರುಮಠಕಲ್ ತಾಲ್ಲೂಕಿನ ದಬ್ ಧಬಿ ಜಲಪಾತ ವೀಕ್ಷಣೆ ಮಾಡಲು ಗೆಳೆಯರು ತೆರಳಿದ್ದರು. ಸಂಜೆ ಮರಳಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿರುವಾಗ ಘಟನೆ ಸಂಭವಿಸಿದೆ.

ಮಳೆಯ ಅಬ್ಬರದಿಂದ ಕೊಂಡಾಪುರ ಬಳಿಯಿರುವ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಸೇತುವೆ ಮೇಲೆ ಹರಿಯುತ್ತಿದೆ.

ಕ್ರೂಸರ್‌ನಲ್ಲಿ ಸುಮಾರು 12ರಿಂದ 15 ಜನರು ಪ್ರಯಾಣಿಸುತ್ತಿದ್ದರು. ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೆಲವರ ಮೊಬೈಲ್‍ಗಳು ನೀರಿನಲ್ಲಿ ಬಿದ್ದು ಹೋಗಿವೆ.

‘ಈ ಮೊದಲು ಇದೇ ಹಳ್ಳದಲ್ಲಿ ಹತ್ತಿ ತುಂಬಿದ ಟ್ರ್ಯಾಕ್ಟರ್ ಮಗುಚಿ ಬಿದ್ದಿತ್ತು. ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಗಳು ಕೂಡ ಭೇಟಿ ನೀಡಿಲ್ಲ. ಸೇತುವೆಯ ಗುಂಡಿ ಮುಚ್ಚುವ ಕಾರ್ಯ ಆಗಿಲ್ಲ’ ಎಂದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.