ಯಾದಗಿರಿ: ‘ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಪೂರ್ವವಿಜ್ಞಾನ ವಿಭಾಗಕ್ಕೆ 2026–27ನೇ ಸಾಲಿನ ಪ್ರವೇಶ, ಉಚಿತ, ಶುಲ್ಕ ವಿನಾಯಿತಿ ಹಾಗೂ ಶಿಷ್ಯ ವೇತನಕ್ಕಾಗಿ ಪರೀಕ್ಷೆ ನಡೆಸಲಾಗುವುದು’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ತಿಳಿಸಿದರು.

‘ಯಾದಗಿರಿ, ಶಹಾಪುರ ಹಾಗೂ ಕಲಬುರಗಿ ಕೇಂದ್ರಗಳಲ್ಲಿ ಫೆಬ್ರುವರಿ 1ರಂದು ಮತ್ತು ದೋರನಹಳ್ಳಿ ಹಾಗೂ ವಡಗೇರಾ ಕೇಂದ್ರಗಳಲ್ಲಿ ಫೆ.8ರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.10ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿವೆ. ಈ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಎಸ್ಎಸ್ಎಲ್ಸಿ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಅಗ್ರ 10ರಲ್ಲಿ ತೇರ್ಗಡೆಯಾದ ತಲಾ 10 ವಿದ್ಯಾರ್ಥಿಗಳಿಗೆ ಐದೂ ಕೇಂದ್ರಗಳಲ್ಲಿ ಉಚಿತ ಪ್ರವೇಶ ಇರಲಿದೆ. ಅರ್ಹ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಹಾಗೂ ಶಿಷ್ಯ ವೇತನಕ್ಕೆ ಆಯ್ಕೆ ಮಾಡಲಾಗುವುದು’ ಎಂದರು.

‘ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಎಸ್ಎಸ್ಎಲ್ಸಿ ಪಠ್ಯ ಆಧಾರಿತವಾಗಿ ಇರಲಿದೆ. ಕನ್ನಡ ಭಾಷೆ, ಭೌತವಿಜ್ಞಾನ, ರಸಾಯಾನವಿಜ್ಞಾನ, ಜೀವವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ಭಾಷೆಯ ತಲಾ 15 ಅಂಕಗಳು ಸೇರಿ ಒಟ್ಟು 90 ಅಂಕಗಳಿಗೆ ಉತ್ತರಿಸಬೇಕು. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಕ್ಕೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳು ಇರಲಿವೆ’ ಎಂದರು ಹೇಳಿದರು.

ಮಾಹಿತಿಗೆ ಮೊಬೈಲ್ ಸಂಖ್ಯೆ 9538514161 (ಯಾದಗಿರಿ), 9482907199 (ಶಹಾಪುರ), 9632555670 (ಕಲಬುರಗಿ), 9353532529 (ವಡಗೇರಾ), ಹಾಗೂ 9972062917ಗೆ (ದೋರನಹಳ್ಳಿ) ಸಂಪರ್ಕಿಸಬಹುದು ಎಂದು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಡಿಯು ಪಿಯು ಯಾದಗಿರಿ ಕಾಲೇಜಿನ ಪ್ರಾಚಾರ್ಯ ಗೋಪಾಲಕೃಷ್ಣ, ಸಿಬ್ಬಂದಿ ಚಂದ್ರು ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.