ಗುರುವಾರ , ಆಗಸ್ಟ್ 22, 2019
22 °C

ಚಿಂಚನಸೂರಗೆ ಸಚಿವ ಸ್ಥಾನಕ್ಕೆ ಆಗ್ರಹ

Published:
Updated:
Prajavani

ಯಾದಗಿರಿ: ಸಪ್ತ ಖಾತೆಗಳನ್ನು ನಿಭಾಯಿಸಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಕೋಲಿ (ಗಂಗಾಮತ) ಸಮಾಜದ ಗೌರವಾಧ್ಯಕ್ಷ ಸಿ.ಎಂ.ಪಟ್ಟೇದಾರ ಆಗ್ರಹಿಸಿದರು.

ಹೈದರಾಬಾದ್ ಕರ್ನಾಟಕದ ಕೋಲಿ ಸಮಾಜದ ಪ್ರಮುಖ ನಾಯಕರಾದ ಬಾಬುರಾವ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಬೇಕು. ‌ಲೋಕಸಭೆ ಚುನಾವಣೆಯಲ್ಲಿ ಉಮೇಶ ಜಾಧವ ಆಯ್ಕೆಯಾಗಲು ಬಹುಮುಖ್ಯ ಕೊಡುಗೆ ನೀಡಿದ್ದಾರೆ. ಈಗಾಗಲೇ ಸಚಿವ ಹುದ್ದೆ ನಿಭಾಯಿಸಿದ ಅನುಭವವಿದೆ. ಹೀಗಾಗಿ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಎಂ. ಮಡ್ಡಿ, ಜಿಲ್ಲಾ ಉಪಾಧ್ಯಕ್ಷ ಮೂರ್ತಿ ಅನಪೂರ, ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಎಚ್., ಯುವ ಮೋರ್ಚಾ ಅಧ್ಯಕ್ಷ ಶರಣು ಆಶನಾಳ, ಮುಖಂಡರಾದ ಆಶಪ್ಪ ಗಾಜರಕೋಟ, ಹನುಮಂತಪ್ಪ ಬಳಿಚಕ್ರ, ಸುರೇಶ ಮಡ್ಡಿ, ನಗರಸಭೆ ಮಾಜಿ ಅದ್ಯಕ್ಷ ಸುರೇಶ ಕೊಟಿಮನಿ, ತಾಪಂ ಮಾಜಿ ಉಪಾಧ್ಯಕ್ಷ ಶರಣಪ್ಪ ಮೋಟ್ನಳ್ಳಿ, ಶಾಂತಪ್ಪ ಚಾಮನಳ್ಳಿ, ಮಹಾದೇವಪ್ಪ ಗಣಪೂರ, ದೇವೀಂದ್ರ ಅಂಬಿಗೇರ, ತಾಯಪ್ಪ ಚಿಗರಿ ಇದ್ದರು.

 

Post Comments (+)