ಮಂಗಳವಾರ, ಜನವರಿ 18, 2022
15 °C
ಶಿಕ್ಷಕರಿಗೆ ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

ಜ್ಯೋತಿ ಸಂಜೀವಿನಿ ಕಾರ್ಡ್‌ನ ಲಾಭ ಪಡೆಯಿರಿ- ಸುರೇಶ ಸಜ್ಜನ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ‘ಶಿಕ್ಷಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಉಚಿತವಾಗಿ ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್‌ ನೀಡಲಾಗುತ್ತಿದೆ. ಎಲ್ಲ ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಹೇಳಿದರು.

ಪಟ್ಟಣದ ಕಲಿಕಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್‌ ವಿತರಿಸಿ ಮಾತನಾಡಿದರು.

ಈ ಕಾರ್ಡ್‌ ಶುಲ್ಕ ರಹಿತವಾಗಿ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ. ಈ ಮೊದಲು ಹಣ ನೀಡಿ ಚಿಕಿತ್ಸೆ ಪಡೆಯಬೇಕಿತ್ತು. ನಂತರ ಮರುಪಾವತಿಗಾಗಿ ವರ್ಷಗಟ್ಟಲೇ ಅಲೆಯಬೇಕಾದ ಪರಿಸ್ಥಿತಿ ಇತ್ತು ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದಪ್ಪ ಟಣಕೆದಾರ ಹಾಗೂ ಪ್ರಧಾನ ಕಾರ್ಯದರ್ಶಿ ಶರಣಬಸವ ಗೋನಾಲ ಮಾತನಾಡಿ ಕಾರ್ಡ್‌ನ ಮಹತ್ವ ಹಾಗೂ ಸುರೇಶ ಸಜ್ಜನ ಅವರ ಸಮಾಜ ಸೇವೆ ಶ್ಲಾಘಿಸಿದರು.

ಈ ಭಾಗದ ಎಲ್ಲ ಶಿಕ್ಷಕರಿಗೆ ಡಾ.ಸುರೇಶ ಸಜ್ಜನ ಅವರು ಉಚಿತವಾಗಿ ಡಿಜಿಟಲ್‌ ಕಾರ್ಡ್‌ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಶಿಕ್ಷಕ ಮಡಿವಾಳಪ್ಪಗೌಡ ಹೆಗ್ಗನದೊಡ್ಡಿ ಮಾತನಾಡಿದರು.

ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖ್ಯಶಿಕ್ಷಕಿ ಸುಶೀಲಾಬಾಯಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ನೌಕರರ ಸಂಘದ ಶರಣಬಸವ ಗಚ್ಚನಮಠ, ದೇವರಾಜ ಪಾಟೀಲ, ಭೀಮಪ್ಪ, ಗುರುನಾಥ ರಾಠೋಡ, ಸುರೇಶ ಮಾಳಗಿ, ಮಾಬು ಪಟೇಲ, ಬಸಮ್ಮ ಗುಂಡಕನಾಳ, ಮಲ್ಲಕಾರ್ಜುನ, ಬಂದೇನವಾಜ ನಾಲತವಾಡ, ಶಾಂತರೆಡ್ಡಿ ಚೌದ್ರಿ ಸೇರಿದಂತೆ ಶಿಕ್ಷಕರು ಹಾಗೂ ಶಿಕ್ಷಕಿಯರು ಇದ್ದರು.

ಕೆಂಭಾವಿ ವಲಯದ ಶಿಕ್ಷಕರಿಗೆ ಸಾಂಕೇತಿಕವಾಗಿ ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್‌ ವಿತರಣೆ ಮಾಡಲಾಯಿತು.

ಶಿಕ್ಷಕ ಸಿದ್ದಣ್ಣ ಧನಗೊಂಡ ನಿರೂಪಿಸಿದರು. ತಿಪ್ಪಣ್ಣ ನಾಯಕ ಸ್ವಾಗತಿಸಿದರು. ಶ್ರೀಶೈಲ ಪಾಸೋಡಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು