ಗುರುವಾರ , ಫೆಬ್ರವರಿ 25, 2021
19 °C
ಜಿಲ್ಲಾ ಕೋರ್ಟ್ ಸಂಕೀರ್ಣ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

‘ರಾಜ್ಯದ ಮಾದರಿ ನ್ಯಾಯಾಲಯವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬಹುದಿನಗಳ ನಿರೀಕ್ಷೆಯಂತೆ ಜಿಲ್ಲಾ ಪ್ರಧಾನ ನ್ಯಾಯಾಲಯ ಹಾಗೂ ನ್ಯಾಯಾಲಯಗಳ ಸಂಕೀರ್ಣ ಮತ್ತು ಬಾರ್ ಅಸೋಸಿಯೇಶನ್ ಕಚೇರಿಗಳ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ಜರುಗುತ್ತಿರುವುದು ಸಂತಸದ ವಿಷಯ. ಕೇವಲ ಮಾದರಿ ಕಟ್ಟಡವಾಗಿ ಮಾತ್ರವಲ್ಲದೆ ನ್ಯಾಯದಾನದಲ್ಲಿಯೂ ಮಾದರಿ ನ್ಯಾಯಾಲಯವಾಗಿ ಯಾದಗಿರಿಯ ಜಿಲ್ಲಾ ನ್ಯಾಯಾಲಯ ರೂಪುಗೊಳ್ಳಲಿ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅಭಯ ಶ್ರೀನಿವಾಸ ಒಕಾ ಹಾರೈಸಿದರು.

ನಗರದ ಮಿನಿ ವಿಧಾನಸೌಧ ಕಟ್ಟಡದ ಹಿಂಭಾಗದಲ್ಲಿ ಗುರುವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯ ಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯಾಂಗ, ವಕೀಲರು ಸೇರಿದಂತೆ ಎಲ್ಲರ ಸಹಕಾರದಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಾಣವಾಗಲಿ. ಅದಕ್ಕೆ ಅವಶ್ಯವಾದ ಸಹಕಾರ, ಮಾರ್ಗದರ್ಶನ ಹಾಗೂ ಬೆಂಬಲವನ್ನು ಹೈಕೋರ್ಟ್ ಹಂತದಿಂದ ನೀಡುವುದಾಗಿ’ ಭರವಸೆ ನೀಡಿದರು.

‘ಪ್ರಸ್ತುತ ಜಿಲ್ಲಾಡಳಿತದ ವತಿಯಿಂದ 10 ಎಕರೆ ಜಮೀನು ನೀಡಲಾಗಿದೆ. ಉಳಿದ ಜಮೀನು ಸಹ ಶೀಘ್ರವೇ ನೀಡುವ ಭರವಸೆಯಿದೆ. ಕಟ್ಟಡ ನಿರ್ಮಾ ಣವು ಪೂರ್ಣಗೊಂಡ ಕೂಡಲೇ ಸುಸಜ್ಜಿತ ನ್ಯಾಯಾಲಯದ ಬೇಡಿಕೆಯು ಪೂರ್ಣಗೊಳ್ಳಲಿದೆ’ ಎಂದರು.

ಜಿಲ್ಲಾ ಆಡಳಿತಾತ್ಮಕ ನ್ಯಾ.ನಟರಾಜ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಹೈಕೋರ್ಟ್ ನ್ಯಾ.ಪಿ.ಎಸ್.ದಿನೇಶಕುಮಾರ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ನ್ಯಾ.ಅಶೋಕ ಕಿಣಗಿ ಆನ್‌ಲೈನ್ ಮೂಲಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ನಾಡೇಕರ ನಾಯ್ಕಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಇದ್ದರು.

ವಕೀಲರಾದ ನರಸಿಂಗರಾವ್ ಕುಲಕರ್ಣಿ ಪರಿಚಯಿಸಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಶ್ರೀಧರ ಸ್ವಾಗತಿಸಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಮಾಡ್ಬಾಳ ನಿರೂಪಿಸಿ, ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು