ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಶಿಕ್ಷಕರಾಗಲು ರೂಢಿ ಪಾಠ ಬುನಾದಿ; ಶಿವರಾಜಪ್ಪ

Last Updated 12 ಜನವರಿ 2022, 5:50 IST
ಅಕ್ಷರ ಗಾತ್ರ

ಸೈದಾಪುರ: ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ರೂಢಿ ಪಾಠ ಯೋಜನೆಯು ಪ್ರಶಿಕ್ಷಣಾರ್ಥಿಗಳಿಗೆ ಭದ್ರ ಬುನಾದಿ ಒದಗಿಸುತ್ತದೆ ಎಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವರಾಜಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಡಿಎಲ್‍ಇಡಿ ಪ್ರಶಿಕ್ಷಣಾರ್ಥಿಗಳು ಆಯೋಜಿಸಿದ ರೂಢಿ ಪಾಠ ಯೋಜನೆಯ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆ ಮಾಡುವ ಕೌಶಲವನ್ನು ಪ್ರಶಿಕ್ಷಣಾರ್ಥಿಗಳಿಗೆ ರೂಢಿ ಪಾಠ ಯೋಜನೆ ಕಲಿಸುತ್ತದೆ. ಮಕ್ಕಳ ಆಸಕ್ತಿಯನ್ನು ಪಾಠದ ಕಡೆ ಕೇಂದ್ರೀಕರಿಸುವುದಕ್ಕೂ ಸಹಕಾರ ನೀಡುತ್ತದೆ ಎಂದರು.

ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವ ಮಾನದಂಡವಾಗುತ್ತದೆ. ಹೀಗಾಗಿ, ಪ್ರಶಿಕ್ಷಣಾರ್ಥಿಗಳು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾವರ್ಧಕ ಡಿಎಲ್‍ಇಡಿ ಕಾಲೇಜು ಉಪನ್ಯಾಸಕ ಸಾಬಯ್ಯ ರಾಯಪ್ಪನೋರ್, ಸಿದ್ರಾಮ ತೊಗಟವೀರ, ಮಹಿಪಾಲರೆಡ್ಡಿ, ಶಿವಕಾಂತಮ್ಮ, ರತ್ನಕ್ಕ ಜಾಲಿಗಿಡ, ಡಿಎಲ್‍ಇಡಿ ವಿದ್ಯಾರ್ಥಿಗಳಾದ ಶಾಕೀರ ಬೇಗಂ, ರಾಚಮ್ಮ, ಪವಿತ್ರಾ, ಭೂಮಿಕಾ, ಗೌರಿಶ್ರೀ, ರಾಧಮ್ಮ, ಸಾನಿಯಾ, ನಾಗಶ್ರೀ, ರೇಣುಕಾ, ಶರಣಮ್ಮ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT