ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ ನಗರಸಭೆ ಚುನಾವಣೆಗೆ ಸಜ್ಜು

‌2 ತಾಲ್ಲೂಕು ಪಂಚಾಯಿತಿ, 1 ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಉಪ ಚುನಾವಣೆ
Last Updated 27 ಮೇ 2019, 14:53 IST
ಅಕ್ಷರ ಗಾತ್ರ

ಯಾದಗಿರಿ: ಶಹಾಪುರ ನಗರಸಭೆ ಸಾರ್ವತ್ರಿಕ ಚುನಾವಣೆ ಮತ್ತು ಸುರಪುರ ತಾಲ್ಲೂಕು ಪಂಚಾಯಿತಿಯ 2 ಕ್ಷೇತ್ರ ಹಾಗೂ ಕಾಮನಟಗಿ ಗ್ರಾಮ ಪಂಚಾಯಿತಿಯ 1 ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಮೇ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಹಾಪುರ ನಗರಸಭೆ 31 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. 24,000 ಪುರುಷ ಮತದಾರರು, 24,023 ಮಹಿಳಾ ಮತದಾರರು ಹಾಗೂ 8 ಇತರೆ ಮತದಾರರು ಸೇರಿದಂತೆ ಒಟ್ಟು 48,031 ಮತದಾರರಿದ್ದಾರೆ. ಐಎನ್‍ಸಿ 29, ಬಿಜೆಪಿ 31, ಜೆಡಿಎಸ್ 25, ಎಸ್‍ಡಿಪಿಐ 2, ಪಕ್ಷೇತರರು 4 ಜನ ಸೇರಿದಂತೆ ಒಟ್ಟು 91 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ.

ಶಹಾಪುರದ ಸರ್ಕಾರಿ ಪದವಿ ಕಾಲೇಜು ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರವಾಗಿದೆ. ಶಹಾಪುರ ನಗರ ಸ್ಥಳೀಯ ಸಾರ್ವತ್ರಿಕ ಚುನಾವಣೆ ಸಂಬಂಧ 7 ಸೂಕ್ಷ್ಮ ಮತಗಟ್ಟೆಗಳು, 7 ಅತಿ ಸೂಕ್ಷ್ಮ ಮತಗಟ್ಟೆಗಳು ಹಾಗೂ 37 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 31 ವಾರ್ಡ್‍ಗಳಲ್ಲಿ 51 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪಿಆರ್‍ಒ 51, ಎಪಿಆರ್‍ಒ 51, 1ನೇ ಪೋಲಿಂಗ್ ಆಫಿಸರ್ 51, 2ನೇ ಪೋಲಿಂಗ್ ಆಫಿಸರ್ 51 ಅಧಿಕಾರಿ/ ಸಿಬ್ಬಂದಿ ನಿಯೋಜಿಸಲಾಗಿದೆ. 2 ಪೊಲೀಸ್ ಇನ್‍ಸ್ಪೆಕ್ಟರ್, 5 ಪಿಎಸ್‍ಐ, 6 ಎಎಸ್‍ಐ ಹಾಗೂ 91 ಪೊಲೀಸ್ ಸಿಬ್ಬಂದಿ, 51 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಉಪ ಚುನಾವಣೆ:

ಸುರಪುರ ತಾಲ್ಲೂಕಿನ ಹೆಬ್ಬಾಳ (ಬಿ) ತಾಲ್ಲೂಕು ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ 4,232 ಪುರುಷ ಮತ್ತು 3,936 ಮಹಿಳೆ ಹಾಗೂ ಇತರೆ 1 ಮತದಾರರು ಸೇರಿದಂತೆ ಒಟ್ಟು 8,169 ಮತದಾರರಿದ್ದು, 10 ಮತಗಟ್ಟೆ ಸ್ಥಾಪಿಸಲಾಗಿದೆ. ಚುನಾವಣಾ ಕಣದಲ್ಲಿ ಅಂತಿಮವಾಗಿ ಐಎನ್‍ಸಿ, ಬಿಜೆಪಿ ಹಾಗೂ ಬಿಎಸ್‍ಪಿ ಸೇರಿ ಒಟ್ಟು 3 ಅಭ್ಯರ್ಥಿಗಳು ಇದ್ದಾರೆ. ಇನ್ನು ಗೆದ್ದಲಮರಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ 5,230 ಪುರುಷ ಮತ್ತು 5,204 ಮಹಿಳಾ ಮತದಾರರು ಸೇರಿದಂತೆ ಒಟ್ಟು 10,434 ಮತದಾರರಿದ್ದು, 14 ಮತಗಟ್ಟೆ ಸ್ಥಾಪಿಸಲಾಗಿದೆ. ಚುನಾವಣಾ ಕಣದಲ್ಲಿ ಐಎನ್‍ಸಿ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಇದ್ದಾರೆ.

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಸುರಪುರ ತಹಶೀಲ್ದಾರ್ ಕಚೇರಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರವಾಗಿದೆ. ಎರಡು ಕ್ಷೇತ್ರಗಳಲ್ಲಿ ಮತದಾನದ ದಿನದಂದು ಕಾರ್ಯನಿರ್ವಹಿಸಲು 96 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. 1 ಪೊಲೀಸ್ ಇನ್‍ಸ್ಪೆಕ್ಟರ್, 5 ಪಿಎಸ್‍ಐ, 8 ಎಎಸ್‍ಐ ಹಾಗೂ 75 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಕಾಮನಟಗಿ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ 888 ಪುರುಷ, 883 ಮಹಿಳಾ ಮತದಾರರಿದ್ದಾರೆ. ಮತದಾನ ಕಾರ್ಯಕ್ಕಾಗಿ ಅಧಿಕಾರಿ, ಸಿಬ್ಬಂದಿ ನಿಯೋಜನೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT