ಶುಕ್ರವಾರ, ನವೆಂಬರ್ 27, 2020
23 °C

ಕೋಳಿಹಾಳ ಗ್ರಾಮದಲ್ಲಿ ಮತ್ತೆ ಸ್ಫೋಟಕ ಸದ್ದು: ಗ್ರಾಮಸ್ಥರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ತಾಲ್ಲೂಕಿನ ಕೋಳಿಹಾಳ ಗ್ರಾಮಗಳಲ್ಲಿ ಮಂಗಳವಾರ ಶಬ್ದ ಹಾಗೂ ಕಂಪಿಸಿದ ಅನುಭವ ಉಂಟಾಗಿದೆ. ಇದರಿಂದ ಗ್ರಾಮಸ್ಥರು ಭಯಗೊಳ್ಳುವಂತಾಗಿದೆ.

ಮಂಗಳವಾರ ಸಂಜೆ 5ನೇ ಸಲ ದೊಡ್ಡ ಪ್ರಮಾಣದಲ್ಲಿ ಸ್ಫೋಟಕದಂತೆ ಸದ್ದು ಬಂದಿದ್ದು, ಗ್ರಾಮಸ್ಥರೆಲ್ಲರೂ ಮನೆಯಿಂದ ಹೊರಬಂದಿದ್ದೇವೆ ಎಂದು ಗ್ರಾಮದ ಗುರಣ್ಣ ಸಾಹುಕಾರ ಇಬ್ರಾಹಿಂಪುರ, ಬಸವರಾಜ ಬೆಳ್ಳಿ ತಿಳಿಸಿದರು.

ಅಕ್ಟೋಬರ್ 7 ರಂದು ಕೂಡಾ ಇದೇ ರೀತಿ ಭೂಮಿಯಿಂದ ಶಬ್ದ ಬಂದಿತ್ತು ಎಂದು ಅಣ್ಣಪ್ಪಗೌಡ ಹಾಗೂ ಮೈಬೂಬ ನಬೂಜಿ ಹೇಳಿದರು.

ವಿಷಯ ತಿಳಿದು ಗ್ರಾಮಕ್ಕೆ ಗ್ರಾಮ ಲೆಕ್ಕಾಧಿಕಾರಿ ಅಮರೇಶ ಮಾಲಗತ್ತಿ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು.

ಕೋಳಿಹಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲ. ಸ್ಪೋಟಕಗಳು ಬಳಸುವದಿಲ್ಲ. ಆದರೆ, ಭೂಮಿಯಿಂದ ಏಕೆ ಈ ರೀತಿ ಸದ್ದು ಮತ್ತು ಕಂಪನ ಉಂಟಾಗುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ಭೂ ವಿಜ್ಞಾನಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.