ಯರಗೋಳ: ಹೊನಗೇರಾ ಗ್ರಾಮದ ಅಂಗನವಾಡಿ ಮುಂಭಾಗದಲ್ಲಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಮೋಟ್ನಳ್ಳಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರಿಗೆಈಚೆಗೆಮನವಿ ಸಲ್ಲಿಸಿದ್ದಾರೆ.

'ಟ್ಯಾಂಕ್ ನಿರ್ಮಿಸಲು, ಬುನಾದಿ ತೋಡಿದ್ದು ಮಣ್ಣು ಮಿಶ್ರಿತ ಮರಳು ಬಳಕೆ ಮಾಡಲಾಗುತ್ತಿದೆ. ಕಾಮಗಾರಿ ಪರಶೀಲನೆಗೆ ಎಂಜಿನಿಯರ್ಗಳು ಬಾರದಂತೆ ರಾಜಕೀಯ ಒತ್ತಡ ಹಾಕುತ್ತಿದ್ದಾರೆ. ಅಂಗನವಾಡಿ ಕಟ್ಟಡದ ಬಳಿಯೇ ಟ್ಯಾಂಕ್ ನ ಮೆಟ್ಟಿಲುಗಳು ನಿರ್ಮಿಸುತ್ತಿದ್ದು, ಇದರಿಂದ ಮುಂದೆ ಅಂಗನವಾಡಿಗೆ ಬರುವ ಗರ್ಭಿಣಿಯರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.

ಅ. 19ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ, ಅಂಗನವಾಡಿ ಕಟ್ಟಡದ ಮುಂದೆ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್ ನಿಂದ, ಆಗುವ ಅನಾಹುತಗಳ ಕುರಿತು ಚಿತ್ರಗಳ ಸಹಿತ ಮಾಹಿತಿ ನೀಡಿದ್ದು, ಕಾಮಗಾರಿ ನಿಲ್ಲಿಸುವಂತೆ ಪತ್ರದ ಮನವಿ ಮಾಡಿದ್ದಾರೆ.

ಮನವಿ ಪತ್ರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಇಲಾಖೆ ಉಪನಿರ್ದೇಶಕರು, ಅಂಗನವಾಡಿ ಕಟ್ಟಡದ ಮುಂದೆ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿ, ಬೇರೆ ಕಡೆ ಸ್ಥಳಾಂತರಿಸಿ ಅಂಗನವಾಡಿ ಕೇಂದ್ರದ ಇತರೆ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವಂತೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯನಿರ್ವಹಕರಿಗೆ ಅಕ್ಟೋಬರ್ 22 ರಂದು ಪತ್ರದ ಮೂಲಕ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಶಿಶು ಅಭಿವೃದ್ಧಿ ಅಭಿವೃದ್ಧಿ ಯೋಜನಾಧಿಕಾರಿ ಗುರುಮಠಕಲ್ ಅವರಿಗೆ ಈ ವಿಷಯದ ಕುರಿತು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಪತ್ರದ ಮೂಲಕ ಮನವಿ ಮಾಡಲಾಗಿದೆ.

'ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅಕ್ಟೋಬರ್ 22ಕ್ಕೆ, ಅಂಗನವಾಡಿ ಕೇಂದ್ರದ ಮುಂದೆ ನೀರಿನ ಟ್ಯಾಂಕ್ ನಿರ್ಮಿಸಲು ಪರವಾನಗಿ ನೀಡಿದ್ದೀರಾ?' ಎಂದು ಪತ್ರದ ಮೂಲಕ ಕೇಳಿದಾಗ, ಅಕ್ಟೋಬರ್ 23ರಂದು ನೀರಿನ ಟ್ಯಾಂಕ್ ನಿರ್ಮಿಸಲು ಪರವಾನಗಿ ನೀಡಿರುವುದಿಲ್ಲ' ಎಂದು ಪತ್ರದ ಮೂಲಕ ಉತ್ತರಿಸಿದ್ದಾರೆ.

ಅಂಗನವಾಡಿ ಕಟ್ಟಡದ ಮುಂದೆ ಚಿಕ್ಕ ಮಕ್ಕಳು ಆಟವಾಡುತ್ತಾರೆ. ಗರ್ಭಿಣಿಯರಿಗೆ ಕುಳಿತುಕೊಳ್ಳಲು ಜಾಗವಿಲ್ಲ. ಬೇರೆ ಕಡೆ ಜಾಗದಲ್ಲಿ ಟ್ಯಾಂಕ್ ನಿರ್ಮಿಸಿದರೆ ಒಳ್ಳೆಯದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಮೋಟ್ನಳ್ಳಿ ಹೇಳಿದರು.

ಶಿಥಿಲಗೊಂಡ ನೀರಿನ ಟ್ಯಾಂಕ್ ಇರುವ ಜಾಗದಿಂದ, ಕೆಲವು ಅಡಿಗಳಷ್ಟು ಮುಂದೆ ನೀರಿನ ಟ್ಯಾಂಕ್ ನಿರ್ಮಾಣ ಗೊಳ್ಳುತ್ತಿದೆ. ಗ್ರಾಮಸ್ಥರು ಸಹಕರಿಸಬೇಕು.
-ಶಿವಶರಣಪ್ಪ. ಹೊನಗೇರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.