ಬುಧವಾರ, ಮಾರ್ಚ್ 29, 2023
32 °C

ಗುರುಮಠಕಲ್: ಗ್ರಾಹಕರಿಗೆ ಬೆಲೆ ಏರಿಕೆ ಹೊರೆ

ಎಂ.ಪಿ.ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹಬ್ಬದ ಖರೀದಿಯಲ್ಲಿ ತೊಡಗಿದ್ದು, ಹೂ, ಹಣ್ಣು ಸೇರಿದಂತೆ ಹಬ್ಬದ ದಿನಸಿಗಳ ಬೆಲೆ ಏರಿಕೆಯಾಗಿದೆ.

ಕಳೆದ ಕೆಲ ತಿಂಗಳಿಂದ ಮಾರುಕಟ್ಟೆಯಲ್ಲಿ ವ್ಯಾಪಾರವಿಲ್ಲದೆ ಪಟ್ಟಣದ ಅಂಗಡಿ ಮುಂಗಟ್ಟುಗಳು ಇದೀಗ ದಿಪಾವಳಿ ಖರೀದಿ ಭರಾಟೆಯಿಂದ ಕಳೆಗಟ್ಟಿವೆ.

ಮಣ್ಣಿನ ಹಣತೆಗಳ ಬೇಡಿಕೆಯಲ್ಲಿ ಏರಿಕೆಯಾದರೂ ಬೆಲೆಯಲ್ಲಿ ಮಾತ್ರ ಏರಿಕೆಯಿಲ್ಲ. ಕುಂಬಾರರು ತಯಾರಿಸಿದ ಸಾಮಪ್ರಾದಾಯಿಕ ಮಣ್ಣಿನ ಹಣತೆಯ ಜೋಡಿಗೆ ಐದು ವರ್ಷಗಳಿಂದ ಕೇವಲ ₹10 ಬೆಲೆಯೇ ಇದೆ ಎಂದು ಮಹಿಳಾ ಗ್ರಾಹಕರೊಬ್ಬರು ತಿಳಿಸಿದರು.

ಹೂವು, ಬಾಳೆ ದಿಂಡು, ಪೂಜಾ ಸಾಮಗ್ರಿಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಗ್ರಾಹಕರಿಂದ ಬೇಡಿಕೆ ಹೆಚ್ಚಿದ ಸಮಯವನ್ನು ನೋಡಿಯೆ ವ್ಯಾಪಾರಿಗಳು ಬೆಲೆ ಏರಿಕೆ ಮಾಡುತ್ತಾರೆ. ಸಾಮಾನ್ಯ ಸಮಯದಲ್ಲಿ ಸಿಕ್ಕ ಬೆಲೆಗೆ ಮಾರುವ ಪರಿಸ್ಥಿತಿ ಇರುತ್ತದೆ ಎಂದು ಗ್ರಾಹಕರಾದ ಸುನೀಲ, ಕೇಶವ ಹಾಗೂ ಸಿದ್ದು ಅಭಿಪ್ರಾಯಪಟ್ಟರು.

ಒಂದು ಕೆ.ಜಿ ಹೂವು ₹50 ರಿಂದ 150, ಬಾಳೆದಿಂಡಿನ ಜೋಡಿ ₹50ರಿಂದ 150, ಬೂದಗುಂಬಳ ₹100, ಬಾಳೆಹಣ್ಣು ₹50 ರಿಂದ 70, ₹ಸೇಬು 30ರಿಂದ 50, ಮೊಸಂಬಿ ₹25 ರಿಂದ 40, ದಾಳಿಂಬೆ 30 ಹೀಗೆ ವಿವಿಧ ಬೆಲೆಯಲ್ಲಿ ಮಾರಾಟವಾಗುತ್ತಿವೆ.

***

ಬೆಲೆ ಏರಿಕೆಯಾಗಿದ್ದರೂ ನಮಗೆ ಉಳಿಯುವುದು ಮಾತ್ರ ಮೊದಲಿನಷ್ಟೆ. ನಾವೂ ಹೈದರಾಬಾದ್ ಅಥವಾ ಕಲಬುರಗಿ ಮಾರುಕಟ್ಟೆಯಿಂದ ಸಾಮಗ್ರಿ ಖರೀದಿಸಿ ಇಲ್ಲಿ ಮಾರುತ್ತೇವೆ
- ಶ್ರೀನಿವಾಸ, ವ್ಯಾಪಾರಿ

***

ನಮಗೆ ಸಿಕ್ಕ ಬೆಲೆಗೆ ತಕ್ಕಂತೆ ನಾವೂ ಮಾರಾಟ ಮಾಡುತ್ತಿದ್ದೇವೆ. ಜನರು ನಾವೆ ಬೆಲೆ ಏರಿಸಿದಂತೆ ಬಾಸವಾಗುತ್ತಿದೆ. ಆದರೆ, ನಮಗೆ ಸಿಗುವುದು ಮಾತ್ರ ಅದೆ ₹10 ಮಾತ್ರ
- ಲಕ್ಷ್ಮಮ್ಮ, ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು