ಹುಣಸಗಿ: ಪಟ್ಟಣದ ಬಸ್ ನಿಲ್ದಾಣದ ಬಳಿ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆಯೇ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಹಿರಿಯ ನಾಯಕರ ಆಗಮಿಸುವ ಕುರಿತಂತೆ ಚರ್ಚಿಸಿರುವುದಾಗಿ ಮುಖಂಡ ಹಾಗೂ ಭೂ ನ್ಯಾಯಮಂಡಳಿ ಸದಸ್ಯ ಮಲ್ಲಣ್ಣ ಕಟ್ಟಿಮನಿ ತಿಳಿಸಿದರು.

ಈ ಕುರಿತು ಬೆಂಗಳೂರನಲ್ಲಿ ಶಾಸಕ ರಾಜಾ ವೇಣುಗೋಪಾಲನಾಯಕ ಅವರ ನೇತೃತ್ವದ ನಿಯೋಗವು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ಹೇಳಿದರು.

‘ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಅನಾವರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುವ ಕುರಿತು ಈಗಾಗಲೇ ಸಭೆಯನ್ನು ನಡೆಸಲಾಗಿದ್ದು, ಸೂಕ್ತ ದಿನಾಂಕ ಮತ್ತು ಸಮಯ ನಿಗದಿಮಾಡಿ ಎಲ್ಲ ಹಿರಿನಾಯಕರಿಗೂ ಆಮಂತ್ರಿಸಲು ಸಮಯಾವಕಾಶ ನೀಡುವಂತೆ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

‘ದಿನಾಂಕ ನಿಗದಿಗೊಳಿಸಿ ಏಪ್ರೀಲ್ ತಿಂಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಿಳಿಸಿದ್ದಾರೆ’ ಎಂದು ಮುಖಂಡರಾದ ಶರಣಪ್ಪ ಮಾಸ್ತರ ಹೇಳಿದರು.

ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ಭೀಮಣ್ಣ ನಾಟೇಕಾರ ಪರಶು ಮುದನೂರು ಸೇರಿದಂತೆ ಇತರರು ಇದ್ದರು.