ನಾರಾಯಣಪುರ: ಇಲ್ಲಿನ ಬಂಡೆಗುಡ್ಡ ಕ್ಯಾಂಪ್ನ ಮಾರಿಯಮ್ಮ ದೇವಿಯ ಜಾತ್ರೆ ಬುಧವಾರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ದೇವಸ್ಥಾನದ ಮುಖ್ಯ ಅರ್ಚಕರು ವಿವಿಧ ವಾದ್ಯ ಮೇಳಗಳೊಂದಿಗೆ ಕೃಷ್ಣಾ ನದಿ ತಟಕ್ಕೆ ತೆರಳಿ ಗಂಗಾ ಜಲವನ್ನು ಕರಗ ಜೋಡಣೆಯೊಂದಿಗೆ ಮೆರವಣಿಗೆ ಮೂಲಕ ತಂದರು. ಬಳಿಕ ದೇವಿಯ ಮೂರ್ತಿ, ಆಯುಧಗಳಿಗೆ ಜಲಾಭಿಷೇಕ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ದೇವಿಯನ್ನು ವಿವಿಧ ಬಗೆಯ ಹೂವು, ವಸ್ತ್ರಗಳಿಂದ ಅಲಂಕರಿಸಲಾಗಿತ್ತು.

ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಮುಖಂಡರು, ಬಂಡೆಗುಡ್ಡ ಕ್ಯಾಂಪ್ನ ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.