ಭಾನುವಾರ, ಫೆಬ್ರವರಿ 23, 2020
19 °C
ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಚಿನ್ನ, ಬಂಗಾರ ಕಳವು ಮಾಡಿದ್ದ ಆರೋಪಿ ಸೆರೆ

₹13.28 ಲಕ್ಷ ಮೌಲ್ಯದ ಆಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ನಜೀರ್ ಅಹ್ಮದ್ ಸಾಬಅಹ್ಮದಸಾಬ ಬಡೆಘರ ಎಂಬುವವರನ್ನು ಬಂಧಿಸುವಲ್ಲಿ ಯಾದಗಿರಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ ಒಟ್ಟು 326 ಗ್ರಾಂ ಬಂಗಾರ ಮತ್ತು 600 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು ₹13.28 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯಾದಗಿರಿ ಗ್ರಾಮೀಣ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು, ವಡಗೇರಾದಲ್ಲಿ 1, ಗುರುಮಠಕಲ್‌ನಲ್ಲಿ 1, ಕೊಡೇಕಲ್ಲ 1, ರಾಯಚೂರು ಜಿಲ್ಲೆ 2, ಗದಗ ಜಿಲ್ಲೆ 2 ಪ್ರಕರಣಗಳು ಹೀಗೆ 10 ಪ್ರಕರಣಗಳನ್ನು ದಾಖಲಾಗಿದ್ದವು.

ಯಾದಗಿರಿ ವೃತ್ತ ವ್ಯಾಪ್ತಿಯಲ್ಲಿ ದಾಖಲಾದ ಸ್ವತ್ತಿನ ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ, ಉಪ ವಿಭಾಗದ ಡಿವೈಎಸ್‌ಪಿ ಶರಣಪ್ಪ ಯು. ಮಾರ್ಗದರ್ಶನದಲ್ಲಿ ಸಿಪಿಐ ಶರಣಗೌಡ ಶರಣಗೌಡ ಎಂ. ನ್ಯಾಮಣ್ಣವರ, ವಡಗೇರಾ ಪೊಲೀಸ್ ಠಾಣೆಯ ಪಿ.ಎಸ್.ಐ ಸಿದರಾಯ ಬಳೂರ್ಗಿ, ಎಚ್‌ಸಿ ರಾಜಕುಮಾರ, ಮಹೇಂದ್ರ, ಯಾದಗಿರಿ ನಗರ ಠಾಣೆಯ ಗಜೇಂದ್ರ ಹಾಗೂ ಗುರುಮಠಕಲ್ ಠಾಣೆಯ ಗಣಪತಿ ಎಚ್.ಸಿ ಇವರನ್ನೊಳಗೊಂಡ ವಿಶೇಷ ತಂಡದ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಪತ್ತೆ ಮಾಡಿದ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು