ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ನೆಲ, ಜಲದ ರಕ್ಷಣೆಗೆ ಬದ್ಧರಾಗಿರಿ

Last Updated 2 ಡಿಸೆಂಬರ್ 2022, 5:58 IST
ಅಕ್ಷರ ಗಾತ್ರ

ಹುಣಸಗಿ: ‘ಭಾಷೆ, ನೆಲ ಜಲದ ರಕ್ಷಣೆಗಾಗಿ ಪ್ರತಿಯೊಬ್ಬ ಕನ್ನಡಿಗರೂ ಬದ್ಧರಾಗಿರಬೇಕು’ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದರು.

ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮಹರ್ಷಿ ವಾಲ್ಮೀಕಿ ಮಂದಿರ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಲಯ ಘಟಕದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮರಾಠಿಗರ ಗಡಿ ತಂಟೆಗೆ ಸರ್ಕಾರ ಸೂಕ್ತ ಕ್ರಮ ಜರುಗಿಸುತ್ತದೆ ಎಂದು ಹೇಳಿದರು.

ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ರಾಜ್ಯದ ಗಡಿ ಭಾಗದ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದರು.

ಡಾ.ಎಂ.ಬಿ.ಕೋರಿ, ಡಾ.ಸೀಮಾ ಕೋರಿ, ಎಸ್.ಎಸ್.ಮಾರನಾಳ, ನಂದಕುಮಾರ, ನೀಲಪ್ಪ ತೆಗ್ಗಿ, ಕೆ.ಬಿ.ಗಡ್ಡದ್, ನಟ ಮಹಾಂತೇಶ ಹಿರೇಮಠ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಸವಪೀಠದ ಪೀಠಾಧಿಪತಿ ವೃಷಬೇಂದ್ರ ಅಪ್ಪ ಸಾನಿಧ್ಯ ವಹಿಸಿದ್ದರು. ರಾಜಾ ಜಿತೇಂದ್ರನಾಯಕ ಜಹಾಗಿರದಾರ, ರಾಜಾ ವೆಂಕಟಪ್ಪನಾಯಕ ಜಹಾಗಿರದಾರ, ವೆಂಕಟೇಶ, ಭೀಮನಗೌಡ ಪೊಲೀಸಪಾಟೀಲ, ಹನುಮಗೌಡ, ಮಲ್ಲು ಮಾಳಿ, ಶರಣು, ಪರಶುರಾಮ ದೇವತಕಲ್ಲ, ಹುಲಗಪ್ಪ ಪಾಳೇಗಾರ, ಬಸವರಾಜ, ರಮೇಶ ಉಪ್ಪಲದಿನ್ನಿ, ರುಬೀನಾ, ಗುರುರಾಜ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT