ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಡಿನಲ್ಲಿ ರೈತರ ಹೋರಾಟಕ್ಕೆ ಜೀವ ಕಳೆ’

ಮೈಲಾರಪ್ಪ ಸಗರ ಅವರ ನುಡಿ ನಮನ
Last Updated 22 ಸೆಪ್ಟೆಂಬರ್ 2021, 16:42 IST
ಅಕ್ಷರ ಗಾತ್ರ

ಸಗರ(ಶಹಾಪುರ): ‘ಸಗರನಾಡಿನ ಜಾನಪದ ಕಲಾವಿದ ಮೈಲಾರಪ್ಪ ಸಗರ ಅವರು ತಮ್ಮ ಕಂಚಿನ ಕಂಠದ ಮೂಲಕ ರೈತ ಹೋರಾಟಕ್ಕೆ ಜೀವ ಕಳೆ ತುಂಬಿದ್ದರು. ಜತೆಗೆ ರೈತ ಶಕ್ತಿಯ ಪ್ರತಿರೂಪವೂ ಆಗಿದ್ದರು’ ಎಂದುಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.

ಇಲ್ಲಿನ ಸಗರ ಗ್ರಾಮದಲ್ಲಿ ಈಚೆಗೆ ರಾಜ್ಯ ರೈತ ಸಂಘ ಹಸಿರು ಸೇನೆ ಆಯೋಜಿಸಿದ ರೈತ ಹೋರಾಟಗಾರ ಮೈಲಾರಪ್ಪ ಸಗರ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈತರ ಪಾಡನ್ನು ಹಾಡಾಗಿಸಿಕೊಂಡು ತಮ್ಮ ಕಂಚಿನ ಕಂಠದಿಂದ ಸಂಗೀತ ಕ್ಷೇತ್ರಕ್ಕೆ ಮೆರಗು ನೀಡಿದ್ದರು. ಅವರ ಹಾಡು ಮತ್ತು ಹೋರಾಟದ ಗೀತೆಗಳು ಇಂದಿಗೂ ರೈತ ಜಾಗೃತಿಗೆ ಪೂರಕವಾಗಿವೆ ಎಂದರು.

ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಕೃಷಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರನ್ನು ಸಂಕಷ್ಟಕ್ಕೆ ದೂಡುವುದು ನಿರಂತರವಾಗಿ ನಡೆಯುತ್ತಿದೆ. ಪ್ರತಿ ಹಳ್ಳಿಯ ರೈತ, ಕೃಷಿ ಕೂಲಿ ಕಾರ್ಮಿಕರು ಜಾಗೃತರಾಗಬೇಕು. ಈಗ ಸಂಕಷ್ಟದ ದುಸ್ಥಿತಿಯಲ್ಲಿ ಇದ್ದೇವೆ. ನಮ್ಮನ್ನು ನಾವೇ ಸಂರಕ್ಷಣೆ ಮಾಡಿಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲದಂತಹ ಕಾಲ ಬಂದಿದೆ ಎಂದು ಹೇಳಿದರು.

ಸಾನ್ನಿಧ್ಯವನ್ನು ಒಕ್ಕಲಗೇರ ಮಠದ ಮರುಳಮಾಹಾಂತ ಶಿವಾಚಾರ್ಯರು, ಲಕ್ಷ್ಮಿಪುರದ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನಾಗಠಾಣ ಮಠದ ಸೋಮಶೇಖರ ಶಿವಾಚಾರ್ಯರು ವಹಿಸಿದ್ದರು.

ಮುಖಂಡರಾದ ಬಸನಗೌಡ ಸುಬೇದಾರ. ಮಾಹಾಂತಗೌಡ ಸುಬೇದಾರ, ಮಾಹಾದೇವಿ ಬೇನಾಳಮಠ, ಮಹೇಶಗೌಡ ಸುಬೇದಾರ, ಶಾಂತವೀರಪ್ಪ ಪಾಟೀಲ ಬಿಜಾಸಪೂರ, ಅಶೋಕಗೌಡ ಸುಬೇದಾರ, ಬಸವಂತ ಕಾಂಬಳೆ, ಹಣಮಂತಪ್ಪ ಹೊಳೆಯಾಚೆ, ಶ್ರಿನಿವಾಸನಾಯಕ, ಮಲ್ಲಣಗೌಡ ಹಗರಟಗಿ, ದೇವಿಂದ್ರಪ್ಪಗೌಡ ಪಾಟೀಲ, ಬಸವರಾಜಪ್ಪಗೌಡ ಹೆಮ್ಮಡಗಿ, ದೇವರಾಜ ಶಿವುಕುಮಾರ ಮಲ್ಲೇದ, ರಾಯಪ್ಪ ನಾಯ್ಕೊಡಿ, ಶೇಖರಪ್ಪ ಮಾಸ್ತರ, ಬೂದೆಪ್ಪ ಉಳ್ಳಿ, ಅಮರಯ್ಯಸ್ವಾಮಿ ಜಾಲಿಬೆಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT