ಹುಣಸಗಿ: ‘ತಾಯಿ ಪ್ರೀತಿ, ಮಮಕಾರದ ಮುಂದೆ ಎಲ್ಲವೂ ಶೂನ್ಯ. ಅದಕ್ಕಾಗಿಯೇ ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾದ್ಯವಿಲ್ಲ ಏನ್ನುತ್ತಾರೆ’ ಎಂದು ದೇವಪುರದ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಅವರ ತಾಯಿ ಮಾತೋಶ್ರೀ ತಿಮ್ಮಮ್ಮ ಶಂಭನಗೌಡ ಹಾಗೂಅವರ ತಂದೆ ಶಂಭನಗೌಡ ಪಾಟೀಲ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಮಾತೃವಂದನಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿದರು.

‘ತಾಯಿಯನ್ನು ಭೂಮಿಗೆ ಹೋಲಿಸಿದ್ದಾರೆ. ತಾಯಿಯನ್ನು ಗೌರವಿಸದ ವ್ಯಕ್ತಿ ದೇವರಿಗೂ ಬೇಡವಾಗುತ್ತಾನೆ. ತಂದೆ ತಾಯಿಯ ಮಹತ್ವ, ಕರುಣೆ ,ಮಮತೆ ಆದರ್ಶಗಳನ್ನು ಹಾಗೂ ಅದರ ಮಹತ್ವವನ್ನು ತಿಳಿಸಲು ರಾಜುಗೌಡ ಅವರು ಮಾತಾ ಪಿತೃ ಗಳ ಮೂರ್ತಿಗಳನ್ನು ನಿರ್ಮಿಸಿದ್ದಾರೆ’ ಎಂದರು.

ಮುದನೂರಿನ ಕಂಠಿಮಠದ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ, ಗುಳಬಾಳದ ಮರಿಹುಚ್ಚೇಶ್ವರ ಶ್ರೀಗಳು ಮತ್ತು ಬಲಶೆಟ್ಟಿಹಾಳದ ಸಿದ್ದಲಿಂಗದೇವರು ಮಾತನಾಡಿದರು.

ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ‘ನಾವು ತಂದೆ ತಾಯಿಯ ಪ್ರೀತಿಯನ್ನು ಕಳೆದುಕೊಂಡಿದ್ದೆವೆ. ಆದರೆ ಕ್ಷೇತ್ರದ ಎಲ್ಲ ತಂದೆ ತಾಯಂದಿರ ಆಶಿರ್ವಾದ, ಮಮತೆ ನಮ್ಮ ಮೇಲೆ ಇದೆ’ ಎಂದು ಭಾವುಕರಾಗಿ ಹೇಳಿದರು.

ಈ ವೇಳೆ ಆರ್ಟಿಜೆ ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ ತಾಯಂದಿರ ಪಾದಪೂಜೆ ಮಾಡಿದರು.

ಈ ಸಂಧರ್ಭದಲ್ಲಿ ಬಸವ ಪೀಠಾಧಿಪತಿ ವೃಷಬೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ 15ಕ್ಕೂ ಹೆಚ್ಚು ಮಠಾಧೀಶರಾದ ರುಕ್ಮಾಪೂರ, ಲಕ್ಷಂಪೂರ, ಮುದನೂರ, ವೀರಘಟ್ಟ, ವಜ್ಜಲ ತಾಂಡಾ, ಅಗತೀರ್ಥ, ಚಟ್ನಳ್ಳಿ, ಲೋಕಾಪುರ, ಫೂಲಬಾವಿ, ಬಂಡೆಪ್ಪನಳ್ಳಿ, ಕೂಡ್ಲಗಿ, ಯಲಗಟ್ಟಿ, ದೇವರಗೋನಾಳ ಸೇರಿದಂತೆ ಹಲವು ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು.

ನೀಲಕಂಠ ಸ್ವಾಮಿಜಿ ವಿರಕ್ತಮಠ, ರಾಣಿ ರಂಗಮ್ಮ ಜಹಾಗಿರದಾರ, ರಾಜಾ ವೆಂಕಟಪ್ಪನಾಯಕ ಜಹಾಗಿರದಾರ, ರಾಜಾ ಕುಶಾಲನಾಯಕ ಜಹಾಗಿರದಾರ, ಹನುಮಂತನಾಯಕ,ಬಸವರಾಜಸ್ವಾಮಿ ಸ್ಥಾವರಮಠ, ಮಣಿಕಂಠನಾಯಕ, ಶಂಕರನಾಯಕ, ಶ್ರೀನಿವಾಸನಾಯಕ, ರಂಗನಾಥ ದೊರಿ, ಗದ್ದೆಪ್ಪ ಪೂಜಾರಿ ,ಬಸನಗೌಡ ಅಳ್ಳಿಕೋಟಿ,ಎಚ್.ಸಿ.ಪಾಟೀಲ, ಚಂದ್ರಶೇಖರಗೌಡ ಮಾಗನೂರ,ವಿರೇಶ ಚಿಂಚೋಳಿ, ಸಿದ್ದನಗಡ ಕರಿಬಾವಿ, ಸುರೇಶ ಸಜ್ಜನ,ವೀರಸಂಗಪ್ಪ ಹಾವೇರಿ, ಕನಕು ಜಿರಾಳ, ಮಲ್ಲು ನವಲಗುಡ್ಡ,ದೇವು ಗೋಪಾಳಿ, ಸಂಗಮೇಶ ಹೂಗಾರ,ಮೋಹನ ಪಾಟೀಲ, ದಾವಲಸಾಬ್ ಕಮತಗಿ, ಸೇರಿದಂತೆ ಇತರರು ಇದ್ದರು.

ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಬಸವರಾಜ ಭದ್ರಗೋಳ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.