ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ‘ನಮ್ಮೂರ ಜಾತ್ರೆ’ ಮಕ್ಕಳ ಕಾದಂಬರಿ ಬಿಡುಗಡೆ

Last Updated 3 ಡಿಸೆಂಬರ್ 2022, 7:14 IST
ಅಕ್ಷರ ಗಾತ್ರ

ಯಾದಗಿರಿ: ಮಕ್ಕಳ ಸಾಹಿತ್ಯ ರಚನೆ ವಿರಳವಾಗುತ್ತಿರುವ ಸಂದರ್ಭದಲ್ಲಿ ‘ನಮ್ಮೂರ ಜಾತ್ರೆ’ ಮಕ್ಕಳ ಓದು ಆಸಕ್ತಿ ಮತ್ತು ಅಭಿರುಚಿ ಹೆಚ್ಚಿಸುತ್ತದೆ ಎಂದು ಸಾಹಿತಿ ಡಾ.ಗಾಳೆಪ್ಪ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕ ವೆಂಕಟೇಶ ಕಲಕಂಭ ‘ನಮ್ಮೂರ ಜಾತ್ರೆ’ ಮಕ್ಕಳ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯಿಸಿ ಮಾತನಾಡಿದರು.

ಶಿಕ್ಷಕರಾಗಿರುವ ವೆಂಕಟೇಶ ಕಲಕಂಭ ಮಗುವಿನ ಮನದ ವಿಕಸವನ್ನು ಗಮನದಲ್ಲಿ ಇಟ್ಟುಕೊಂಡು ವಾಸ್ತವದ ಕಥೆಗಳನ್ನು ಗ್ರಾಮೀಣ ಜೀವನ ಸೊಗಡಿನಲ್ಲಿ ಜಾತ್ರೆಯ ಆಚರಣೆಯ ಸಂಭ್ರಮವನ್ನು ಉತ್ತಮವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ
ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿದರು.

ಕೃತಿ ಬಿಡುಗಡೆಗೊಳಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿಯೇ ಕೃತಿಗಳನ್ನು ಹೊರತಲಾಗುವುದು ಎಂದು ಅವರು ಹೇಳಿದರು.

ಯಾದಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಕೃತಿ ಲೇಖಕ ವೆಂಕಟೇಶ ಕಲಕಂಭ ಮಾತನಾಡಿ, ಬಾಲ್ಯದಲ್ಲಿ ಕಂಡುಂಡ ಅನುಭವಗಳನ್ನು ಸಾಹಿತ್ಯ ರೂಪದಲ್ಲಿ ಸರಳವಾಗಿ ಮಕ್ಕಳ ಮನಕ್ಕೆ ಮುಟ್ಟುವ ರೀತಿಯಲ್ಲಿ ಕೌಟುಂಬಿಕ ಸಂಬಂಧ, ಗ್ರಾಮೀಣ ಜಾನಪದ ಸಾಂಸ್ಕೃತಿಯ ಪರಿಚಯ ಈ ಕೃತಿಯಲ್ಲಿ ಅಡಗಿದೆ ಎಂದು
ತಿಳಿಸಿದರು.

ಸರ್ಕಾರಿ ಗ್ರಾಮೀಣ ಶಿಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಶುಭಾಷರಡ್ಡಿ ಪಾಟೀಲ ಬೀರನೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಾಶ್ಚಂದ್ರ ಕೌಲಗಿ ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಂಥ ದಾಸೋಹಿ ಕಳಾವತಿ ಶ್ರೀನಿವಾಸುಲು ಪಂಚಾಳ ಚಂಡ್ರಿಕಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕರ್‌, ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರ, ಚನ್ನಪ್ಪಗೌಡ ಮೋಸಂಬಿ, ಎಂ.ಕೆ.ಬೀರನೂರ, ವಡಗೇರಾ ಕಸಾಪ ಅದ್ಯಕ್ಷ ಮಲ್ಲಿಕಾರ್ಜುನ ಕರಕಳ್ಳಿ, ಡಾ. ಭೀಮರಾಯ ಲಿಂಗೇರಿ, ಅಶೋಕ ಪಂಚಾಳ ಚಂಡ್ರಿಕಿ ಇದ್ದರು.

ಶಿಕ್ಷಕರಾದ ಹಣಮಯ್ಯ ಕಲಾಲ್‌ ಪ್ರಾರ್ಥಿಸಿದರು. ಉಪನ್ಯಾಸಕ ಮನೋಹರ ಸ್ವಾಗತಿಸಿದರು. ಸಿಆರ್‌ಪಿ ಬಂಗಾರಪ್ಪ ವಂದಿಸಿದರು. ಚಂದ್ರಕಾಂತರಡ್ಡಿ ಮಾಲಿ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT