ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರೀಡಾ ದಿನಾಚರಣೆ- 10 ಕಿಮೀ ಓಟ: ಕ್ರೀಡಾಪಟುಗಳಿಗೆ ಅವ್ಯವಸ್ಥೆ

Published 29 ಆಗಸ್ಟ್ 2023, 3:29 IST
Last Updated 29 ಆಗಸ್ಟ್ 2023, 3:29 IST
ಅಕ್ಷರ ಗಾತ್ರ

ಯಾದಗಿರಿ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮ ದಿನದ ಪ್ರಯುಕ್ತ 2023-24 ನೇ ಸಾಲಿನ ರಾಷ್ಟ್ರೀಯ ಕ್ರೀಡಾಕೂಟ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ‍, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ 10 ಕಿಮೀ ಓಟ ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಿಂದ ಆರಂಭವಾದ ಓಟ ಹೊಸ ಬಸ್ ನಿಲ್ದಾಣ, ಹೊಸಳ್ಳಿ ಕ್ರಾಸ್, ಲುಂಬಿನಿ ವನ, ಡಾ.ಅಂಬೇಡ್ಕರ್ ವೃತ್ತ, ಕನಕ ವೃತ್ತ, ಪದವಿ ಕಾಲೇಜು ಮಾರ್ಗದಿಂದ ಕ್ರೀಡಾಂಗಣ ತಲುಪಿತು.

ರಸ್ತೆಯಲ್ಲಿ ಕ್ರೀಡಾಪಟುಗಳು ಓಡುವ ಜಾಗದಲ್ಲಿ ಹಲವಾರು ವಾಹನಗಳು ಸಂಚಾರ ಮಾಡಿದವು. ಬಿಡಾಡಿ ದನಗಳು ರಸ್ತೆಯಲ್ಲಿ ಬಿಡಾರ ಹೂಡಿದ್ದವು‌.

ಅವುಗಳ ಮಧ್ಯೆಯೇ ಕ್ರೀಡಾಪಟುಗಳು ಓಡಾಡಿದರು.‌ ಇದರಿಂದ ಕೆಲವರಿಗೆ ಅಸ್ತವ್ಯಸ್ತವಾಯಿತು. ಪೊಲೀಸರು ಮುಂದೆ ತೆರಳಿದ್ದರೂ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವು. ಒಂದು ಮಾರ್ಗದಲ್ಲಿ ಓಟಕ್ಕೆ ಅನುಕೂಲ ಮಾಡಿಕೊಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬಂದವು. ಕ್ರೀಡಾಪಟುಗಳಿಗೆ ಕನಕ ವೃತ್ತದ ಬಳಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಪುರುಷರ ವಿಭಾಗದಲ್ಲಿ ಆನಂದ ಸಣ್ಣ ಸಾಬಣ್ಣ ಕೊಂಕಲ್,‌ ಮಹಿಳೆಯರ ವಿಭಾಗದಲ್ಲಿ ಭೀಮಾಬಾಯಿ ಶರಣಪ್ಪ ಯರಗೋಳ ಪ್ರಥಮ ಸ್ಥಾನ ಪಡೆದರು.

ಪ್ರಥಮ ಸ್ಥಾನ ಪಡೆದ ಆನಂದ, ಭೀಮಾಬಾಯಿ ಮಾತನಾಡಿ, 'ಪ್ರಥಮ ಬಾರಿಗೆ ಓಟದಲ್ಲಿ ಪಾಲ್ಗೊಂಡಿದ್ದು, ಮೊದಲನೇ ಸ್ಥಾನ ಪಡೆದಿದ್ದು ಖುಷಿಯಾಗಿದೆ. ಶಾಲೆಯ ಅಥ್ಲೆಟಿಕ್ ನಲ್ಲಿ ಭಾಗವಹಿಸಿದ್ದು ಈಗ ನೆರವಿಗೆ ಬಂದಿದೆ ಎಂದು 'ಪ್ರಜಾವಾಣಿ' ಜೊತೆ ಸಂತಸ ಹಂಚಿಕೊಂಡರು.‌

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಓಟಕ್ಕೆ ಹಸಿರು ನಿಶಾನೆ ತೋರಿದರು.

ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜ ಬಾವಿಹಳ್ಳಿ, ಕ್ರೀಡಾ ತರಬೇತುದಾರರಾದ ದೊಡ್ಡಪ್ಪ ನಾಯಕ, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT