₹ 35.5 ಕೋಟಿ ವೆಚ್ಚದಲ್ಲಿ ನಿರ್ಮಾಣ
ವಕೀಲರ ಸಂಘವನ್ನು ಹೊಂದಿರುವ ಹೊಸ ನ್ಯಾಯಾಲಯ ಸಂಕೀರ್ಣವನ್ನು 10 ಎಕರೆಯಲ್ಲಿ ₹ 35.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ನಿರ್ಮಾಣದ ಹೊಣೆಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿತ್ತು. ಎಂಟು ನ್ಯಾಯಾಲಯ ಸಭಾಂಗಣಗಳನ್ನು ಹೊಂದಿದೆ. ಇದರಲ್ಲಿ ಪ್ರಧಾನ ಜಿಲ್ಲೆಯ ನ್ಯಾಯಾಲಯ ಸಭಾಂಗಣಗಳೂ ಸೇರಿವೆ. ಹೆಚ್ಚುವರಿ ನ್ಯಾಯಾಧೀಶರಿಗೂ ಸಹ ನ್ಯಾಯಾಲಯ ಸಭಾಂಗಣಗಳಿವೆ. ಬಾರ್ ಅಸೋಸಿಯೇಷನ್ ಕಟ್ಟಡ ವಾಹನ ಪಾರ್ಕಿಂಗ್ ಕ್ಯಾಂಟೀನ್ ಉದ್ಯಾನ ಶೌಚಾಲಯಗಳನ್ನು ಸಹ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ.