ಯಾದಗಿರಿ ನಗರದ ಬೇಕರಿಯಲ್ಲಿ ಬುಧವಾರ ಕೇಕ್‌ಗಳ ಖರೀದಿಯಲ್ಲಿ ನಿರತವಾದ ಗ್ರಾಹಕರು
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೇಕ್‌ಗಳ ಮಾರಾಟ ಸಾಧಾರಣವಾಗಿತ್ತು. ಈ ಹಿಂದೆ ಒಂದು ಕೆ.ಜಿ. ಖರೀದಿಸುತ್ತಿದ್ದವರು ಅರ್ಧ ಕೆ.ಜಿ ಖರೀದಿಸಿದ್ದಾರೆ
– ರವಿ ಬಾಲಾಜಿ, ಬೇಕರಿ ಮಾಲೀಕ
ಬಿಗಿ ಬಂದೋಬಸ್ತ್
ಉತ್ತಮ ನಾಗರಿಕರಾಗಿ ಹೊಸ ವರ್ಷವನ್ನು ಶಾಂತಿಯುತವಾಗಿ ಮತ್ತು ಜವಾಬ್ದಾರಿಯಿಂದ ಆಚರಿಸಿ. ನಿಮ್ಮ ಸಂಭ್ರಮವು ಅಂಶಾತಿ ಅಲ್ಲ ಸಂತೋಷವನ್ನು ಹಂಚಲಿ ಎಂದು ಜಿಲ್ಲಾ ಪೊಲೀಸ್ ಇಲಾಖೆ ಆಶಯ ವ್ಯಕ್ತಪಡಿಸಿತು. ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದೆ. ಹೊಸ ವರ್ಷಾಚರಣೆಯ ಆಯೋಜಕರು ಸಂಘಟನೆಗಳು ಮತ್ತು ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದು ಅಹಿತಕರ ಘಟನೆಗಳು ನಡೆದಲ್ಲಿ 112ಗೆ ಕರೆ ಮಾಡುವಂತೆಯೂ ತಿಳಿಸಿದೆ.