ಬುಧವಾರ, ಸೆಪ್ಟೆಂಬರ್ 18, 2019
28 °C
ಬ್ಯಾರೇಜ್‌ ಗೇಟ್‌ ತೆರೆಯದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಮೊದಲು ‘ಮಾತೆ’ ಆಶ್ರಮ; ನಂತರ ಸಂತ್ರಸ್ತರ ಭೇಟಿ!

Published:
Updated:

‌ಯಾದಗಿರಿ: ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಪರಿಹಾರ ಪರಿಶೀಲನೆಗೆ ಬಂದಿದ್ದ ಸಚಿವರಾದ ಶ್ರೀರಾಮುಲು ಮತ್ತು ಪ್ರಭು ಚವಾಣ ಅಧಿಕಾರಿಗಳ ಸಭೆ ನಡೆಸಿದರು.

ಸಭೆಯ ನಂತರ ಸಂತ್ರಸ್ತರ ಭೇಟಿಗೆ ತೆರಳಬೇಕಿದ್ದ ಅವರು, ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಆಶ್ರಮಕ್ಕೆ ಭೇಟಿ ನೀಡಿದರು. ಸಂಜೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಿದರು.

ಶಿಸ್ತು ಕ್ರಮ: ‘ಭೀಮಾ ನದಿಗೆ ಹೆಚ್ಚಿನ ನೀರು ಹರಿಸುವ ಮಾಹಿತಿ ಇದ್ದರೂ ವಡಗೇರಾ ತಾಲ್ಲೂಕಿನ ಜೋಳದಡಗಿ ಬ್ರಿಜ್ ಕಂ ಬ್ಯಾರೇಜ್‌ನ ಗೇಟ್‌ಗಳನ್ನು ಕೆಬಿಜೆಎನ್‌ಎಲ್‌ ಅಧಿಕಾರಿಗಳು ತೆರೆದಿಲ್ಲ. ಇದರಿಂದ ಹಿನ್ನೀರು ಮತ್ತಷ್ಟು ವ್ಯಾಪಿಸಿ ಬೆಳೆ ಹಾನಿಯಾಗಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಕೊಪ್ಪಳ ವರದಿ: ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಅವಲೋಕನಕ್ಕೆ ಬಂದಿದ್ದ ಸಚಿವ ಸಿ.ಸಿ. ಪಾಟೀಲ ಸಹ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನ ಪಡೆದರು.

Post Comments (+)