ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ನೋಟಿಸ್‌; ಖಾಸಗಿಯವರಿಗಿಲ್ಲ

ದೂರು ನೀಡಿದ ಅಧಿಕಾರಿ ಎತ್ತಂಗಡಿ, ನಡೆಯುವುದೇ ಪಾರದರ್ಶಕ ತನಿಖೆ?
Published 24 ಆಗಸ್ಟ್ 2023, 5:38 IST
Last Updated 24 ಆಗಸ್ಟ್ 2023, 5:38 IST
ಅಕ್ಷರ ಗಾತ್ರ

ಬಿ.ಜಿ.ಪ್ರವೀಣಕುಮಾರ

ಯಾದಗಿರಿ: ನಗರಸಭೆ ವ್ಯಾಪ್ತಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 1,310 ಅಕ್ರಮ ಖಾತಾಗಳಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗೆ ನೋಟಿಸ್‌ ನೀಡಲಾಗಿದೆ. ಆದರೆ, ₹4 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ ಮಾಡಿರುವ ನಗರಸಭೆ ಅಧಿಕಾರಿ, ಸಿಬ್ಬಂದಿ ಹಾಗೂ ಆಸ್ತಿ ವರ್ಗಾವಣೆ ಮಾಡಿಕೊಂಡ ಖಾಸಗಿಯವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

1,310 ಅಕ್ರಮ ಖಾತಾ ನಕಲುಗೆ ಸಂಬಂಧಿಸಿದಂತೆ ನಾಲ್ವರು ಹಿಂದಿನ ಪೌರಾಯುಕ್ತರು, ಇಬ್ಬರು ಕಂದಾಯ ಅಧಿಕಾರಿ, ಒಬ್ಬ ಪ್ರಥಮ ದರ್ಜೆ ಸಿಬ್ಬಂದಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಆದರೆ, ಆಹಾರ ಇಲಾಖೆಯ ಆಸ್ತಿ ಪರಭಾರೆ ಮಾಡಿದ ಸಿಬ್ಬಂದಿ ವಿರುದ್ಧ ಯಾಕೆ ಇನ್ನೂ ನೋಟಿಸ್‌ ನೀಡಿಲ್ಲ. ಅವರಿಂದ ಸ್ಪಷ್ಟಿಕರಣ ಪಡೆದಿಲ್ಲ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಪರಭಾರೆಯಲ್ಲಿ ಯಾರು ಭಾಗಿ?:

ಆಸ್ತಿ ಸಂಖ್ಯೆ 5–1–408/23ಎ ಪರಭಾರೆಯಲ್ಲಿ ಆಪರೇಟರ್‌ ಕೃಷ್ಣಪ್ಪ (ಡಿಇಒ ಹೊರಗುತ್ತಿಗೆ), ವಿಷಯ ನಿರ್ವಾಹಕಿ ಶಿವಲೀಲಾ, ಕಿರಿಯ ಎಂಜಿನಿಯರ್ ರಾಕೇಶ್ ರೆಡ್ಡಿ, ಕರವಸೂಲಿಗಾರ ಚನ್ನಪ್ಪ, ಕಂದಾಯ ನಿರೀಕ್ಷಕ ರಿಯಾಜುದ್ದೀನ್‌, ಕಂದಾಯ ಅಧಿಕಾರಿ ವಿಶ್ವ ಪ್ರತಾಪ್ ಅಲೆಕ್ಸಾಂಡರ್, ಪೌರಾಯುಕ್ತ ಎಚ್‌.ಬಕ್ಕಪ‍್ಪ, ಆಸ್ತಿ ಸಂಖ್ಯೆ 5–1–408/24ಎ ರಲ್ಲೂ ಇವರೆ ಪರಭಾರೆ ಮಾಡಿದ್ದಾರೆ.

ಆಸ್ತಿ ಸಂಖ್ಯೆ 5–1–408/25ಎ ರಲ್ಲಿ ಆಪರೇಟರ್‌ ಕೃಷ್ಣಪ್ಪ (ಡಿಇಒ ಹೊರಗುತ್ತಿಗೆ), ವಿಷಯ ನಿರ್ವಾಹಕಿ ಶಿವಲೀಲಾ, ಕರವಸೂಲಿಗಾರ ಚನ್ನಪ್ಪ, ಕಂದಾಯ ನಿರೀಕ್ಷಕ ಸುರೇಶ ವಿಭೂತೆ, ಕಂದಾಯ ಅಧಿಕಾರಿ ವೈ.ನರಸಿಂಹ ರೆಡ್ಡಿ, ಪೌರಾಯುಕ್ತ ಎಚ್‌.ಬಕ್ಕಪ‍್ಪ, ಆಸ್ತಿ ಸಂಖ್ಯೆ 5–1–408/26ಎ ರಲ್ಲಿ ಆಪರೇಟರ್‌ ಕೃಷ್ಣಪ್ಪ (ಡಿಇಒ ಹೊರಗುತ್ತಿಗೆ), ವಿಷಯ ನಿರ್ವಾಹಕಿ ಶಿವಲೀಲಾ, ಕಿರಿಯ ಎಂಜಿನಿಯರ್ ರಾಕೇಶ್ ರೆಡ್ಡಿ, ಕರವಸೂಲಿಗಾರ ಚನ್ನಪ್ಪ, ಕಂದಾಯ ನಿರೀಕ್ಷಕ ರಿಯಾಜುದ್ದೀನ್‌, ಕಂದಾಯ ಅಧಿಕಾರಿ ವಿಶ್ವ ಪ್ರತಾಪ್ ಅಲೆಕ್ಸಾಂಡರ್, ಪೌರಾಯುಕ್ತ ಎಚ್‌.ಬಕ್ಕಪ‍್ಪ ಪರಭಾರೆ ಮಾಡಿದ್ದಾರೆ ಎಂದು ದೂರು ಸಲ್ಲಿಕೆಯಾಗಿದೆ.

ಆಸ್ತಿ ಸಂಖ್ಯೆ 5–1–408/27 ಎ ಪರಭಾರೆಯಲ್ಲಿ ಆಪರೇಟರ್‌ ಕೃಷ್ಣಪ್ಪ (ಡಿಇಒ ಹೊರಗುತ್ತಿಗೆ), ವಿಷಯ ನಿರ್ವಾಹಕಿ ಶಿವಲೀಲಾ, ಕಿರಿಯ ಎಂಜಿನಿಯರ್ ರಾಕೇಶ್ ರೆಡ್ಡಿ, ಕರವಸೂಲಿಗಾರ ಚನ್ನಪ್ಪ, ಕಂದಾಯ ನಿರೀಕ್ಷಕ ರಿಯಾಜುದ್ದೀನ್‌, ಕಂದಾಯ ಅಧಿಕಾರಿ ವಿಶ್ವ ಪ್ರತಾಪ್ ಅಲೆಕ್ಸಾಂಡರ್, ಪೌರಾಯುಕ್ತ ಎಚ್‌.ಬಕ್ಕಪ‍್ಪ ಪರಭಾರೆ ಮಾಡಿದ್ದಾರೆ.

ಆಸ್ತಿ ಸಂಖ್ಯೆ 5–1–408/28 ಎ ಆಪರೇಟರ್‌ ಕೃಷ್ಣಪ್ಪ (ಡಿಇಒ ಹೊರಗುತ್ತಿಗೆ), ವಿಷಯ ನಿರ್ವಾಹಕ ಹಣಮಂತ, ಕಿರಿಯ ಎಂಜಿನಿಯರ್ ಲಿಂಗಾರೆಡ್ಡಿ, ಕರವಸೂಲಿಗಾರ ಚನ್ನಪ್ಪ, ಕಂದಾಯ ನಿರೀಕ್ಷಕ ಸುರೇಶ ವಿಭೂತೆ, ಕಂದಾಯ ಅಧಿಕಾರಿ ನರಸಿಂಹರೆಡ್ಡಿ, ಪೌರಾಯುಕ್ತ ಶರಣಪ್ಪ ವರ್ಗಾವಣೆ ಮಾಡಿದ್ದಾರೆ ಎಂದು ದೂರು ಸಲ್ಲಿಕೆಯಾಗಿದೆ.

ಅಲ್ಲದೇ ಆಪರೇಟರ್‌ ಅಶೋಕ (ಡಿಇಒ ಹೊರಗುತ್ತಿಗೆ), ವಿಷಯ ನಿರ್ವಾಹಕಿ ಪುಷ್ಪಾವತಿ, ಕರವಸೂಲಿಗಾರ ಚನ್ನಪ್ಪ, ಕಂದಾಯ ನಿರೀಕ್ಷಕ ಸುರೇಶ ವಿಭೂತೆ, ಕಂದಾಯ ಅಧಿಕಾರಿ ನರಸಿಂಹರೆಡ್ಡಿ, ಪೌರಾಯುಕ್ತ ಶರಣಪ್ಪ ಆನ್‌ಲೈನ್‌ ಖಾತಾ ವರ್ಗಾವಣೆ ಮಾಡಿದ್ದಾರೆ ಎಂದು ಹಿಂದಿನ ಪೌರಾಯುಕ್ತರು ನೀಡಿರುವ ದೂರಿನಲ್ಲಿ ತಿಳಿದು ಬಂದಿದೆ.

ಕರಾ ಕರಣ ಆದೇಶದಲ್ಲಿ ಮೊಗಲಪ್ಪ ಸಾಬಣ್ಣ ಹೆಸರು ನಮೂದಿಸಲಾಗಿದೆ. ಉಪ ನೋಂದಣಿಯಲ್ಲಿ ನಾಗರಾಜ ಶಿವಣ್ಣ ಖರೀದಿದಾರರು ಎಂದು ನಮೂದಿಸಲಾಗಿದೆ. ಎರಡನೆಯ ಆಸ್ತಿಯಲ್ಲಿ ಮಹಾದೇವಮ್ಮ ಶರಣಪ್ಪ, ಶರಣಮ್ಮ ದುರ್ಗಪ್ಪ, ಮೂರನೇ ಆಸ್ತಿಯಲ್ಲಿ ಮಹಾದೇವಮ್ಮ ಶರಣಪ್ಪ, ನಾಲ್ಕನೆಯ ಆಸ್ತಿಯಲ್ಲಿ ಮಲ್ಲೇಶಿ ಬಸಪ್ಪ, ಶಿವಣ್ಣ ಜೇವರ್ಗಿ ಬಸಪ್ಪ, ಐದನೇ ಆಸ್ತಿಯಲ್ಲಿ ಮಹಾದೇವಮ್ಮ ಶರಣಪ್ಪ, ಶರಣಮ್ಮ ದುರ್ಗಪ್ಪ, 6ನೇ ಆಸ್ತಿಯಲ್ಲಿ ನಾಗರಾಜ ಶಿವಣ್ಣ, ಮಹಾದೇವಮ್ಮ ತಿಮ್ಮಣ್ಣ, ಸೋನಿ ಗೌತಮ್ ಎಂದು ನಮೂದಿಸಲಾಗಿದೆ.

ದೂರುಗಳು ನೀಡಿದ ಅಧಿಕಾರಿಯನ್ನು ಮೂಲ ಹುದ್ದೆಗೆ ಬಿಡುಗಡೆ ಮಾಡಲಾಗಿದ್ದು, ಈಗ ಎರಡು ತಂಡಗಳು ದೂರಿನ ವಿಷಯವಾಗಿ ಯಾವ ರೀತಿ ತನಿಖೆ ಮಾಡಿ ವರದಿ ನೀಡುತ್ತವೆ ಎನ್ನುವುದು ಕುತೂಹಲಕಾರಿಯಾಗಿದೆ.

Quote - ಆಹಾರ ಇಲಾಖೆಯ ಸರ್ಕಾರಿ ಆಸ್ತಿ ಖಾಸಗಿಯವರಿಗೆ ಪರಭಾರೆ ಕುರಿತು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಅವರು ವರದಿ ನೀಡಿದ ನಂತರ ಈ ಬಗ್ಗೆ ಪರಿಶೀಲಿಸಲಾಗುವುದು –ಶರಣಬಸಪ್ಪ ಕೋಟೆಪ್ಪಗೊಳ ಎಡಿಸಿಯೂ ಆಗಿರುವ ಜಿಲ್ಲಾ ನಗರಾಭಿವೃದ್ಧಿ ಕೋಶ ಪ್ರಭಾರಿ ಯೋಜನಾ ನಿರ್ದೇಶಕ

Quote - ಆಹಾರ ಇಲಾಖೆಯ ಸರ್ಕಾರಿ ಆಸ್ತಿ ಖಾಸಗಿಯವರಿಗೆ ಪರಭಾರೆ ಕುರಿತು ತನಿಖೆ ಮಾಡುತ್ತಿದ್ದೇನೆ. ಹಿಂದಿನ ಪೌರಾಯುಕ್ತರಿಂದ ಈ ಬಗ್ಗೆ ದಾಖಲಾತಿಗಳನ್ನು ತೆಗೆದುಕೊಂಡಿದ್ದೇನೆ. –ಹಂಪಣ್ಣ ಸಜ್ಜನ್‌ ಉಪವಿಭಾಗಾಧಿಕಾರಿಯೂ ಆದ ಪ್ರಭಾರಿ ನಗರಸಭೆ ಪೌರಾಯುಕ್ತ

Quote - ನಗರಸಭೆಯ ಅಕ್ರಮಗಳು ಬಯಲಿಗೆ ಬಂದ ನಂತರ ಪೌರಾಯುಕ್ತರನ್ನು ಕ್ಲುಲಕ ಕಾರಣ ನೀಡಿ ಬಿಡುಗಡೆ ಮಾಡಿರುವುದು ಸರಿಯಲ್ಲ. ಕಾನೂನು ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ತೊಂದರೆಯಾಗಲಿದೆ. ಇದು ನಕಾರಾತ್ಮಕ ಸಂದೇಶ ಹೋಗುತ್ತದೆ. ಜಿಲ್ಲಾಧಿಕಾರಿಯವರು ಯಾರದೋ ಕೈಗೊಂಬೆಯಾಗಿ ಒತ್ತಡಕ್ಕೆ ಮಣಿದಿದ್ದಾರೆ – ದೇವೇಂದ್ರ ಹೆಗ್ಗಡೆ ನಿವೃತ್ತ ಪೌರಾಯುಕ್ತ

Cut-off box - ಇನ್ನೂ ಇವೆ ಹಗರಣಗಳು ಯಾದಗಿರಿ ನಗರಸಭೆಯಲ್ಲಿ ಸದ್ಯ ಎರಡು ಪ್ರಕರಣಗಳು ಮಾತ್ರ ಬಯಲಿಗೆ ಬಂದಿದ್ದು ಇನ್ನೂ 6 ಹಗರಣಗಳು ಇವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅದರಲ್ಲಿಯೂ ಕೋಟ್ಯಂತರ ಅಕ್ರಮಗಳಿವೆ. ಹೀಗಾಗಿ ಅವುಗಳು ಹೊರ ಬರದಂತೆ ಅಧಿಕಾರಿಯನ್ನೇ ಎತ್ತಂಡಗಿ ಮಾಡಿಸುವ ಮೂಲಕ ಅವು ಅಲ್ಲೇ ಮುಚ್ಚಿ ಹೋಗುವಂತೆ ಮಾಡಿದ್ದಾರೆ ಎನ್ನಲಾಗಿದೆ. ನಗರಸಭೆಯ ಎಲ್ಲ ಹಗರಣಗಳಲ್ಲಿ ಎಲ್ಲ ಪಕ್ಷದವರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಪಕ್ಷಾತೀತವಾಗಿ ಪೌರಾಯುಕ್ತರನ್ನು ಮೂಲ ಹುದ್ದೆಗೆ ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದು ಗುಟ್ಟಾಗಿ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT